Monday, November 23, 2026
HomeBelagaviಬೆಳಗಾವಿ ವಿಮಾನ ನಿಲ್ದಾಣಕ್ಕೆ ಲಿಂ. ಡಾ. ಶಿವಬಸವ ಸ್ವಾಮೀಜಿ ಹೆಸರು ನಾಮಕರಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಲಿಂ. ಡಾ. ಶಿವಬಸವ ಸ್ವಾಮೀಜಿ ಹೆಸರು ನಾಮಕರಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ

ಬೆಳಗಾವಿ
ಬೆಳಗಾವಿ ರೈಲ್ವೆ ‌ನಿಲ್ದಾಣಕ್ಕೆ ನಾಗನೂರು ಮಠದ ಲಿಂ.ಡಾ.ಶಿವಬಸವ ಸ್ವಾಮೀಜಿ ಅವರ ನಾಮಕರಣ ಮಾಡಲು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
ಲಿಂಗಾಯತ ಸಮಾಜ ಸೇವೆಯ ಜೊತೆಗೆ ನಾಡು, ನುಡಿ ಹೋರಾಟದಲ್ಲಿ ಮಂಚೂಣಿಯಲ್ಲಿದ್ದು, ಬೆಳಗಾವಿ ಕನ್ನಡದ ನೆಲ ಎಂದು ಒತ್ತಿ ಹೇಳಿ ಕನ್ನಡ ಹೋರಾಟಗಾರರಿಗೆ ಸ್ಪೂರ್ತಿ ನೀಡಿದ್ದ ಲಿಂ.ಡಾ. ಶಿವಬಸವ ಸ್ವಾಮೀಜಿ ಅವರ ಹೆಸರು ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲು ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಅದರಂತೆ ಬೀದ‌ರ್ ರೇಲ್ವೆ ನಿಲ್ದಾಣಕ್ಕೆ ಚನ್ನಬಸವ ಪಟ್ಟದದೇವರು, ವಿಜಯಪುರದ ರೇಲ್ವೆ ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಜೀ ರೇಲ್ವೆ ನಿಲ್ದಾಣ ಮತ್ತು ಶಿವಮೊಗ್ಗದ ಸುರಗೊಂಡನಕೊಪ್ಪ ರೇಲ್ವೆ ನಿಲ್ದಾಣಕ್ಕೆ ಭಾಯಾಗಡ ರೇಲ್ವೆ ನಿಲ್ದಾಣವೆಂದು ಮರು ನಾಮಕರಣ ಮಾಡಲು ಸರಕಾರಿ ಮೂಲಭೂತ ಸೌಕರ್ಯ ಅಭಿವೃದ್ಧಿ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

Total Views 27
RELATED ARTICLES

Most Popular

Recent Comments

KNN City News
Home
E-Paper