
ಬೆಳಗಾವಿ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಗಳಲೆ ರೋಗ ದಾಂಗುಡಿ.
ಬೆಳಗಾವಿಯ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣ ಮೃಗಗಳ ಸಾವಿಗೆ ಕಾರಣವಾಗಿದ್ದ ಗಳಲೆ ರೋಗ ಬೆಳಗಾವಿ ಜಿಲ್ಲೆಯ ಸಾಕು ಪ್ರಾಣಿಗಳಿಗೂ ವಕ್ಕರಿಸುತ್ತಿದ್ದು ಹಿಮೋರೆಜಕ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾ ಸೊಂಕಿಗೆ ರೈತರ ಜಾನುವಾರುಗಳು ಮೃತಪಡುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ.
ಎಚ್.ಎಸ್ ಬ್ಯಾಕ್ಟೀರಿಯಾ ಸೋಂಕಿಗೆ ಆತಂಕಕ್ಕೆ ಒಳಗಾಗಿರುವ ಬೆಳಗಾವಿ ರೈತರು ಗಂಟು ರೋಗದಿಂದ ಈಗಾಗಲೇ ಏಳು ಜಾನುವಾರು ಸಾವು ಮೃತಪಟ್ಟಿವೆ. ಮೃತ ಜಾನುವಾರುಗಳಿಗೆ ಹಿಮೋರೆಜಿಕ್ ಸೆಪ್ಟಿಸೆಮೀಯಾ ಸೋಂಕು ತಾಗಿರುವ ಶಂಕೆ ಇದ್ದು ಪಶುಸಂಗೋಪನಾ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ರೈತರಲ್ಲಿ ಆತಂಕ ಮೂಡಿದೆ.
ಬೆಳಗಾವಿಯಲ್ಲಿ ಹಿಮೋರೆಜಿಕ್ ಸೆಪ್ಟಿಸೆಮೀಯಾ ಉಲ್ಭಣ ಆಗುವ ಎಚ್ಚರಿಕೆ ಇದೆ ಎಂದು ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆಯ ಮುನ್ಸೂಚನೆ ನೀಡಿದೆ.
ಪಶುಸಂಗೋಪನೆ ಇಲಾಖೆಗೆ ಈಗಾಗಲೇ ಈ ಸಂದೇಶ ರವಾನಿಸಿರುವ ರಾಷ್ಟ್ರೀಯ ಸಂಸ್ಥೆ ಹಸುಗಳ ಆರೈಕೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅರಣ್ಯ ಇಲಾಖೆಯಿಂದಲೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದರೂ ಇಲ್ಲಿಯವರೆಗೆ ಯಾವುದೇ ಮುಂಜಾಗ್ರತೆ ವಹಿಸದೇ ಪಶು ಸಂಗೋಪನೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿರುವುದಕ್ಕೆ ಏಳು ಜಾನುವಾರುಗಳು ಬಲಿಯಾಗಿದ್ದಾವೆ ಎನ್ನುವ ಆರೋಪ ರೈತರದ್ದಾಗಿದೆ.
