Monday, November 23, 2026
HomeBelagaviಸಿಎಂ, ಸಚಿವ ಸಂಪುಟದ ಬಗ್ಗೆ ಮಾತನಾಡಲ್ಲ: ಪರಮೇಶ್ವರ

ಸಿಎಂ, ಸಚಿವ ಸಂಪುಟದ ಬಗ್ಗೆ ಮಾತನಾಡಲ್ಲ: ಪರಮೇಶ್ವರ

ಬೆಳಗಾವಿ
ವಿಶೇಷವಾಗಿ ಮುಖ್ಯಮಂತ್ರಿ ವಿಚಾರ, ಸಂಪುಟ ವಿಸ್ತರಣೆಯ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ. ಈಗ ನಾನೇನು ಮಾತನಾಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಬುದುವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿಯಲ್ಲಿ ಡಿ.8 ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಹೆಚ್ಚು ಪ್ರತಿಭಟನೆಗಳು ಆಗುತ್ತದೆ. ಅವರಿಗೆ ಉಅ ಬಗ್ಗೆ ಮುಂಜಾಗ್ರತಾ ಕ್ರಮ ಹಾಗೂ ಯಾವ ರೀತಿ ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸುವೆ ಎಂದರು.
ಪ್ರತಿಭಟನೆ ನಡೆಯುವಾಗ ಯಾವುದೇ ಕಾನೂನು ದೃಷ್ಟಿಯಿಂದ‌ ತೊಂದರೆಯಾದರೆ ಯಾವ ರೀತಿ ನಿಭಾಯಿಸಿಕೊಂಡು‌ ಹೋಗಬೇಕು ಎಂದು ಅಧಿಕಾರಿಗಳ ಜೊತೆಗೆ ಪರಿಶೀಲನೆ ನಡೆಸುವೆ ಎಂದರು.
ಶಾಸಕ ವಿಶ್ವಾಸ ವೈದ್ಯ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 75
RELATED ARTICLES

Most Popular

Recent Comments

KNN City News
Home
E-Paper