Monday, November 23, 2026
HomeBelagaviಪಾಪಿ ಗಂಡನಿಂದ ಅಮಾನವೀಯ ಕೃತ್ಯ

ಪಾಪಿ ಗಂಡನಿಂದ ಅಮಾನವೀಯ ಕೃತ್ಯ

ಅಥಣಿ
ಗಂಡನ ಮನೆಯಲ್ಲಿ ಜಗಳಕ್ಕೆ ಬೇಸತ್ತು ತವರು ಮನೆಗೆ ಹೋದ ಹೆಂಡತಿ ಹಾಗೂ ಆಕೆಯ ಕುಟುಂಬಸ್ಥರನ್ನು ಗಂಡ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಯ ಯತ್ನಿಸಿದ ಘಟನೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಡಿ.10 ರಂದು ಗಂಡ ಭೀಮಾ ಭೋಸಲೆ ಹೆಂಡತಿ ಹಾಗೂ ಅವರ ಕುಟುಂಬಸ್ಥರನ್ನು ಕೊಲೆಗೆ ಯತ್ನಿಸಿದ ಆರೋಪಿ.ಭೀಮಾ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ ನಿವಾಸಿಯಾಗಿದ್ದಾನೆ. ಗಂಡನ ಕಾಟ ತಾಳಲಾರದೇ ತವರು ಮನೆಗೆ ಹೋಗಿದ್ದ ಹೆಂಡತಿ ಹಾಗೂ ಅವರ ಮನೆಯವರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.
ನಾನು ಬೇಡ ಅಂದರು ನೀವು ಹೇಗೆ ನನ್ನ ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಿರಿ ಎಂದು ಸಿಟ್ಟಾದ ಗಂಡ. ಹೆಂಡತಿಯ ತವರು ಮನೆಗೆ ಹೋಗಿ ಮನೆಯಲ್ಲಿದ್ದ 6 ಜನರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ್ದಾನೆ.
ಸಂಜು ಸಾಳುಂಕೆ,ಶಂಕರ್ ಸಾಳುಂಕೆ, ಕ್ರಿಷ್ಣಾ ಸಾಳುಂಕೆ, ಅಂಕುಶ ಪಡತಾರೆ,ಮನೋಹರ ಪಡತಾರೆ, ಪತ್ನಿ ರಾಣಿ ಭೋಸಲೆ ಗೆ ಗಂಭೀರ ಗಾಯವಾಗಿವೆ. ಸದ್ಯಕ್ಕೆ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಗಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Total Views 327
RELATED ARTICLES

Most Popular

Recent Comments

KNN City News
Home
E-Paper