
ಬೆಳಗಾವಿ
ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ.ರಸ್ತೆಯವರೆಗೆ ಹಳೆ ಸಿಡಿಪಿ ಪ್ರಕಾರಣ ಪುನರ್ ಪರಿಶೀಲನೆ ಮಾಡಿ ಜಾಗ ಕಳೆದುಕೊಂಡವರಿಗೆ ಕೋಟ್ಯಂತರ ರೂ. ಪರಿಹಾರ ನೀಡದ ಬೆಳಗಾವಿ ಸ್ಮಾರ್ಟ್ ಸಿಟಿ ಎಂ.ಡಿ.ವಿರುದ್ಧ ಪ್ರಕರಣ ದಾಖಲಾಗಿದೆ.
ಸಿಡಿಪಿ ಪ್ಲ್ಯಾನ್ ಪ್ರಕಾರ ರಸ್ತೆ ಮಾಡಬೇಕು. ಆದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ರಸ್ತೆ ಮಾಡಿಸಿದ್ದರು. ಇಲ್ಲಿನ ಜನರೊಂದಿಗೆ ಚರ್ಚೆ ನಡೆಸಲಾಗಿದೆ. ಅವರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ರಸ್ತೆ ನಿರ್ಮಾಣದಲ್ಲಿ ಜಾಗ ಕಳೆದುಕೊಂಡವರಿಗೆ ಪರಿಹಾರ ನೀಡಬೇಕೆಂದು ಸೂಚನೆ ನೀಡಿದರೂ ನಿರ್ಲಕ್ಷ್ಯ ಮಾಡಿದ್ದ ಸ್ಮಾರ್ಟ್ ಸಿಟಿ ಎಂ.ಡಿ. ವಿರುದ್ಧ ದೂರು ದಾಖಲಾಗಿದೆ.
ನ್ಯಾಯಾಲಯದ ದಾಖಲೆ ಆಧರಿಸಿ “ಬೆಳಗಾವಿ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆ ಸೇರಿಕೊಂಡು 2.18 ಕೋಟಿಯ ಪರಿಹಾರ ಪರಿಹಾರ ನೀಡಬೇಕಿತ್ತು. ಆದರೆ ನ್ಯಾಯಾಲಯದ ಆದೇಶ ಪಾಲನೆ ಮಾಡದ ಸ್ಮಾಟ್೯ ಸಿಟಿ ಎಂಡಿ ವಿರುದ್ಧ ಈಗ ಪ್ತಕರಣದ ದಾಖಲಾಗಿದೆ.
ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಅನಂತ ರಾಮನಾಥ ಹೆಗಡೆ ವಿ. ಬೆಳಗಾವಿ ಸ್ಮಾರ್ಟ್ ಸಿಟಿ ಕಾರ್ಪೊರೇಷನ್ ಪ್ರಕರಣದಲ್ಲಿ, ನ್ಯಾಯಾಲಯವು ಕಾರ್ಪೊರೇಷನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಸಿಸ್ಟಂಟ್ ಕಮಿಷನರ್ ಅವರು ನೀಡಿದ ವರದಿಯಂತೆ, ಬೆಳಗಾವಿ ಸ್ಮಾರ್ಟ್ ಸಿಟಿ ಕಾರ್ಪೊರೇಷನ್ ಸಂಸ್ಥೆಯು ಗರಗಟ್ಟಿ ಕುಟುಂಬಕ್ಕೆ₹2,17,99,489 (ಸುಮಾರು ₹2.18 ಕೋಟಿ) ಪರಿಹಾರವನ್ನು ಪಾವತಿಸಬೇಕೆಂದು ನಿರ್ಧರಿಸಲಾಗಿತ್ತು.
ಆದರೆ ಈ ಮೊತ್ತವನ್ನು ಪಾವತಿಸದೇ, ಯಾವುದೇ ಪ್ರತಿನಿಧಿಯೂ ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ, ನ್ಯಾಯಾಲಯವು ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ರೂ. 25,000 ಮೊತ್ತದ ಜಾಮೀನು ವಾರಂಟ್ ಜಾರಿಗೊಳಿಸುವಂತೆ ಆದೇಶಿಸಿದೆ. ಈ ವಾರಂಟ್ ಅನ್ನು 18 ಡಿಸೆಂಬರ್ 2025ರೊಳಗೆ ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಕಾರ್ಯಗತಗೊಳಿಸಬೇಕೆಂದು ನಿರ್ದೇಶಿಸಲಾಗಿದೆ.
ಹೀಗೆಯೇ, ನ್ಯಾಯಾಲಯವು ಈಗಾಗಲೇ 27 ಅಕ್ಟೋಬರ್ 2025 ರಂದು ಕಾರ್ಪೊರೇಷನ್‌ಗೆ ಪರಿಹಾರ ಮೊತ್ತವನ್ನು ಪಾವತಿಸಲು ಆದೇಶ ನೀಡಿದ್ದರೂ, ಅದರ ಪಾಲನೆ ಆಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯವು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಪರಿಹಾರ ಮೊತ್ತವನ್ನು ಪಾವತಿಸದಿದ್ದಲ್ಲಿ ಜವಾಬ್ದಾರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
–
