
ಬೆಳಗಾವಿ
ಇಲ್ಲಿನ ಕಿಲ್ಲಾ ಕೋಟೆಯ ಬಳಿ ಇರುವ ಚವಾನಿ ಪ್ರದೇಶದಲ್ಲಿ ಆರಂಭವಾಗಿರುವ ಹೂವಿನ ಮಾರುಕಟ್ಟೆಯನ್ನು ಆರಂಭಿಸಬಾರದು ಎಂದು ಒತ್ತಾಯಿಸಿ ಬುಧವಾರ ದಂಡು ಮಂಡಳಿಯ ಸಿಇಓಗೆ ವಿವಿಧ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿದರು.
ಈಗಾಗಲೇ ಬೆಳಗಾವಿಯ ಅಶೋಕ ನಗರದಲ್ಲಿ ರಾಜ್ಯ ಸರಕಾರದಿಂದ ಸುಸಜ್ಜಿತವಾದ ಪುಷ್ಪ ಹರಾಜು ಕೇಂದ್ರ ಸ್ಥಾಪನೆ ಮಾಡಿ ಹೂವಿನ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಚವಾನಿ ಪ್ರದೇಶದಲ್ಲಿ ಆರಂಭವಾಗಿರುವ ಹೂವಿನ ಮಾರುಕಟ್ಟೆಯಿಂದ ನಮಗೆ ನಷ್ಟವಾಗುತ್ತದೆ ಎಂದು ತಿಳಿಸಿದರು.
ಕ್ಯಾಂಪ್ ಪ್ರದೇಶದಲ್ಲಿನ ಹೂವಿನ ಮಾರುಕಟ್ಟೆ ಆರಂಭವಾದರೆ ನಾಳೆ ಅಲ್ಲಿಯೇ ಬಂದು ಧರಣಿ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ರಾಜಕುಮಾರ ಟೋಪಣ್ಣವರ, ಸುಜೀತ್ ಮುಳಗುಂದ, ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
