
ಬೆಳಗಾವಿ
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸಿಟಿಸ್ 2.o 135 ಕೋಟಿ ರೂ ಅನುದಾನಕ್ಕೆ ಆಯ್ಕೆಯಾದ ಬೆಳಗಾವಿ ನಗರವನ್ನು 75 ಕೋಟಿ ರೂ.ಗೆ ಇಳಿಕೆ ಮಾಡಿದ ಶ್ರೇಯ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ಪಾಲಿಕೆಯ ಬಿಜೆಪಿ ಮಾರ್ಗದರ್ಶಕ, ಶಾಸಕ ಅಭಯ ಪಾಟೀಲ್ ಗೆ ಸಲ್ಲುತ್ತದೆ ಎಂದು ಬೆಳಗಾವಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸ್ಸಿನ ಯೋಜನೆಗೆ ಬೆಳಗಾವಿ ಪಾಲಿಕೆಯ ಬಿಜೆಪಿ ಮಾರ್ಗದರ್ಶಕ, ಶಾಸಕ ಅಭಯ ಪಾಟೀಲ್, ಮೇಯರ್, ಉಪಮೇಯರ್ ಸರಿಯಾಗಿ ಆಡಳಿತ ನಡೆಸಿದ್ದರೇ ಬೆಳಗಾವಿಗೆ ಈ ದುಸ್ಥಿತಿ ಬರುತ್ತಿಲ್ಲ ಎನ್ನುವುದು ಬೆಳಗಾವಿ ನಗರದ ಜನರ ಪ್ರಶ್ನೆಯಾಗಿದೆ.
ಈಗಾಗಲೇ ರಾಜ್ಯ ಸರಕಾರ ಬೆಳಗಾವಿ ಮಹಾನರ ಪಾಲಿಕೆಗೆ ವಿಶೇಷ ಅನುದಾನ ನೀಡಿದ್ದು, ಅದರಲ್ಲಿಯೇ ಸಿಟಿಸ್ 2.o ಯೋಜನೆಗೆ ಬಳಸಿಕೊಳ್ಳಬೇಕೆಂದು ಸೂಚನೆ ನೀಡಿದೆ. ಅಲ್ಲದೆ ಈ ಯೋಜನೆ ಅನುಷ್ಠಾನಕ್ಕೆ ಬೇಕಾಗುವ ಅನುದಾನದ ಬಗ್ಗೆ ಚರ್ಚೆ ನಡೆಸಲು ರಾಜ್ಯ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬಳಿ ಪಾಲಿಕೆ ಬಿಜೆಪಿ ಮಾರ್ಗದರ್ಶಕ, ಶಾಸಕ ಅಭಯ ಪಾಟೀಲ್ ಆಗಲಿ, ಮೇಯರ್, ಉಪಮೇಯರ್ ಎಷ್ಟು ಬಾರಿ ಸಭೆ ನಡೆಸಿದ್ದಾರೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು. ಅದನ್ನು ಬಿಟ್ಟು ಕೇವಲ ಕಾಟಾಚಾರಕ್ಕೆ ಇಂದೋರ್, ಜೈಪುರ ಪ್ರವಾಸ ಅಧ್ಯಯನ ಮಾಡಿದ ಪಾಲಿಕೆ ಬಿಜೆಪಿ ಹಾಗೂ ವಿಪಕ್ಷಗಳು ಸಾರ್ವಜನಿಕರ ತೆರಿಗೆ ಹಣದಲ್ಲಿ ಮೋಜು ಮಸ್ತಿ ಮಾಡಿದ್ದೆ ದೊಡ್ಡ ಸಾಧನೆಯಾಗಿದೆ ಎನ್ನುವುದು ಬೆಳಗಾವಿ ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯ ಈ ಅವಧಿಯ ಮೇಯರ್, ಉಪಮೇಯರ್ ಆಡಳಿತದಲ್ಲಿ ಬೆಳಗಾವಿ ನಗರಕ್ಕೆ ನೀಡಿದ ಕೊಡುಗೆಯಾದರೂ ಏನು ? ಸಿಟಿಸ್ 2.o ಯೋಜನೆ ಅನುಷ್ಠಾನವಾದರೆ ಬೆಳಗಾವಿಯನ್ನು ಮತಷ್ಟು ಸುಂದರವಾಗಿ ಮಾಡಲು ಸಹಾಯವಾಗುತ್ತದೆ. ಆ ಯೋಜನೆಗೆ ಕೊಳ್ಳಿ ಇಡಲು ಹೊರಟಿರುವ ಪಾಲಿಕೆ ಬಿಜೆಪಿ ಆಡಳಿತ ಒಂದು ತಿಂಗಳಲ್ಲಿ ತಮ್ಮ ಪಾಲಿಕೆ ಹಣ ಸಂದಾಯ ಮಾಡದಿದ್ದರೆ ಯೋಜನೆ ಬೆಳಗಾವಿ ಕೈತಪ್ಪಿ ಹೋಗುವ ಭೀತಿ ನಗರ ಜನರಲ್ಲಿ ಕಾಡುತ್ತಿದೆ.
