Monday, November 23, 2026
HomeBelagaviಸಿಟಿಸ್ 2.0 ಯೋಜನೆ ವಿಳಂಬ ಖಂಡಿಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ

ಸಿಟಿಸ್ 2.0 ಯೋಜನೆ ವಿಳಂಬ ಖಂಡಿಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ

ಬೆಳಗಾವಿ
ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಿಟಿಸ್ 2.೦ ಯೋಜನೆ ಜಾರಿಗೆ ಆಗುತ್ತಿರುವ ವಿಳಂಬ ಹಾಗೂ ಪ್ರಕ್ರಿಯಾತ್ಮಕ ಅಡೆತಡೆಗಳ ಕುರಿತು ಸಿಟಿಜನ್ಸ್ ಕೌನ್ಸಿಲ್ ಸದಸ್ಯರು ಮಂಗಳವಾರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಸಿಟಿಜನ್ಸ್ ಕೌನ್ಸಿಲ್ ಅಧ್ಯಕ್ಷ ಸತೀಶ ತೆಂಡೂಲ್ಕರ್ ನೇತೃತ್ವದ ಪ್ರತಿನಿಧಿ ಸಿಟಿಸ್ ಈ ಯೋಜನೆ ನಗರ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿದ್ದು, ತ್ವರಿತವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿತು. ಯೋಜನೆಯಿಂದ ಮೂಲಸೌಕರ್ಯ ವೃದ್ಧಿ, ಪರಿಸರ ಸ್ನೇಹಿ ಅಭಿವೃದ್ಧಿ ಹಾಗೂ ನಗರ ಸುಧಾರಣೆಗೆ ಮಹತ್ವದ ಕೊಡುಗೆ ದೊರೆಯಲಿದೆ ಎಂದು ಸದಸ್ಯರು ವಿವರಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಆಯುಕ್ತರು, ಸಂಬಂಧಿಸಿದ ಎಲ್ಲಾ ಇಲಾಖೆಗಳೊಂದಿಗೆ ತಕ್ಷಣ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ, ಯೋಜನೆಯನ್ನು ಬೇರೆ ನಗರಕ್ಕೆ ಸ್ಥಳಾಂತರವಾಗದಂತೆ, ಬೆಳಗಾವಿಯಲ್ಲಿಯೇ ಜಾರಿಗೆ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬಸವರಾಜ ಜವಳಿ, ವಿಕಾಸ್ ಕಲಘಟಗಿ, ಕಮಲೇಶ್ ಖೋಡಾ, ನಿತೇಶ್ ಜೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 28
RELATED ARTICLES

Most Popular

Recent Comments

KNN City News
Home
E-Paper