Thursday, November 19, 2026
HomeKoppalನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಮಹಿಳೆಯರಿಗೆ ಗೌರವ ಸನ್ಮಾನ –ಸಂಗಮೇಶ್ ಸುಗ್ರಿವಾ

ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಮಹಿಳೆಯರಿಗೆ ಗೌರವ ಸನ್ಮಾನ –ಸಂಗಮೇಶ್ ಸುಗ್ರಿವಾ

ಗಂಗಾವತಿ ವಿಧಾನಸಭಾ ಕ್ಷೇತ್ರದ 18 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ  : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

ಕನ್ನಡಮ್ಮ ಸುದ್ದಿ–ಕೊಪ್ಪಳ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವಾ ಕಾರ್ಯಚಟುವಟಿಕೆಗಳು ಸೇರಿದಂತೆ ಇತರ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಗುರುತಿಸಿ ಅವರನ್ನು ಗೌರವಿಸಿ ಸನ್ಮಾನಿಸಲಾಗುತ್ತದೆ ಎಂದು ಸುಗ್ರೀವಾ ಜನಸೇವಾ ಸಮಿತಿ  ಸಂಸ್ಥಾಪಕ ಅಧ್ಯಕ್ಷರು ಹಾಗೂ  ಬಿ.ಜೆ.ಪಿ. ಯುವ ಮುಖಂಡರಾದ ಸಂಗಮೇಶ್ ಸುಗ್ರೀವಾ ಹೇಳಿದರು.  ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಸುಗ್ರಿವಾ ಸಂಸ್ಥೆಯು ಹಲವು ಜನಪರ ಮತ್ತು ಜನಸೇವಾ ಕಲ್ಯಾಣ ಕಾರ್ಯಕ್ರಮಗಳನ್ನು ಜರುಗಿಸುತ್ತ ಬಂದಿದ್ದು, ಸಂಕಷ್ಟದಲ್ಲಿರುವ ಮತ್ತು ಸಮಸ್ಯೆಗಳಿಗೆ ಸಿಲುಕಿರುವ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ನ್ಯಾಯ ಒದಗಿಸುವ ಕೆಲಸಗಳ ಮೂಲಕ ನಿಸ್ವಾರ್ಥದಿಂದ ಜನಸೇವೆ ಮಾಡುತ್ತಿದ್ದೇವೆ ಎಂದರು.

ಕಳೆದ ಮೂರು ವರ್ಷದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಇತರ ಸಂದರ್ಭದಲ್ಲಿ ವಿವಿಧ ವಲಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವಾಕಾರ್ಯದಲ್ಲಿರುವ ಮಹಿಳೆಯರಿಗೆ ಇನ್ನೂ ಹೆಚ್ಚಿನ ಉತ್ತೇಜನ, ಪ್ರೋತ್ಸಹವನ್ನು ಕೊಡುವ ಉದ್ದೇಶದಿಂದ ಗೌರವಿಸಿ ಸನ್ಮಾನ ಮಾಡುವ ಕಾರ್ಯವನ್ನು ಮುಂದುವರೆಸಿದ್ದು,  ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ  ಸುಮಾರು 18  ಗ್ರಾಮ ಪಂಚಾಯತಿಗಳಲ್ಲಿಯೂ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಂಚಾಯಿತಿ ಮಟ್ಟದ ಒಕ್ಕೂಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳಿಗೆ ಮತ್ತು ನರೇಗಾ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಕಾಯಕ ಮಿತ್ರರು ಜಿ.ಕೆ.ಎಂ ಮಹಿಳೆಯರನ್ನು ಗುರುತಿಸಿ ಪಂಚಾಯತಿವಾರು ಸನ್ಮಾನಿಸಿ ಗೌರವಿಸುವ  ಕಾರ್ಯಕ್ರಮವನ್ನು ನಡೆಯಲಿದೆ.

ಮಾರ್ಚ್ 9 ರಿಂದ ಕಿನ್ನಾಳ ಗ್ರಾಮದಿಂದ ಆರಂಭಿಸಿ ವಿಧಾನಸಭಾ ಕ್ಷೇತ್ರದ ಎಲ್ಲಾ 18 ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮವು ಜರುಗಲಿದೆ, ಈಗಾಗಲೇ ಹಲವು ಸಮಾಜಿಕ ಸೇವಾ ಕಾರ್ಯಗಳ ಮೂಲಕ ಗಂಗಾವತಿ ಸೇರಿದಂತೆ ಇತರಡೆಗಳಲ್ಲಿಯೂ ಸುಗ್ರೀವಾ ಜನಸೇವಾ ಸಮಿತಿಯು ಜನಪರಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಈ ಸಂದರ್ಭದಲ್ಲಿ ಸುಗ್ರೀವಾ ಜನಸೇವಾ ಸಮಿತಿ  ಸಂಸ್ಥೆಯ ಮುಖಂಡರಾದ ಪ್ರಭುಗೌಡ ಪಾಟೀಲ್ ವಕೀಲರು, ವೆಂಕಟೇಶ್, ರೇವಣಪ್ಪ ಗುಡ್ಲಾನೂರ್ ಇತರರು ಹೇಳಿದರು.

==ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ, ಪಕ್ಷ ವಹಿಸುವ ಯಾವುದೇ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ಮಾಡುವೆ, ಕ್ಷೇತ್ರದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳ ಜೊತೆ, ಸುಗ್ರಿವಾ ಸೇವಾ ಸಂಸ್ಥೆಯ ಮೂಲಕ ಜನಸೇವೆ ಮಾಡುತ್ತಿರುವೆ, ಪಕ್ಷದ ಹಿರಿಯರ ಹಾಗೂ ಜನರ ಸಹಕಾರ ಬೆಂಬಲದಿಂದ ಎಲ್ಲಾ ಜನಸಮುದಾಯದವರಿಗಾಗಿ ಜನಕಲ್ಯಾಣಸೇವಾ ಕೆಲಸಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವೆ: ಸಂಗಮೇಶ್ ಸುಗ್ರಿವಾ, ಸುಗ್ರೀವಾ ಜನಸೇವಾ ಸಮಿತಿ  ಸಂಸ್ಥೆಯ ಸಂಸ್ಥಾಪಕರು ಹಾಗೂ ಬಿಜೆಪಿ ಯುವ ಮುಖಂಡರು ಗಂಗಾವತಿ==

Total Views 37
RELATED ARTICLES

Most Popular

Recent Comments

KNN City News
Home
E-Paper