Monday, November 23, 2026
HomeBelagaviಡ್ರಗ್ಸ್, ಪೆನ್ನಿ ಪತ್ತೆ ಹಚ್ಚಿದ ಪೊಲೀಸ್ ಶ್ವಾನ

ಡ್ರಗ್ಸ್, ಪೆನ್ನಿ ಪತ್ತೆ ಹಚ್ಚಿದ ಪೊಲೀಸ್ ಶ್ವಾನ

ಬೆಳಗಾವಿ
ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ ಪೆನ್ನಿ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ನಾಗೇಶ್ ಭಗತ್ ಎಂಬಾತನು ಮುಂಬೈಯಿಂದ ಪೆನ್ನಿ ಡ್ರಗ್ಸ್ ತರಿಸಿಕೊಂಡು ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮಾರಾಟ ಮಾಡುತ್ತಿದ್ದನೆಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ದಾಳಿ ವೇಳೆ ಪೊಲೀಸರು ಬರುತ್ತಿರುವುದು ತಿಳಿದ ಆರೋಪಿಯು ಡ್ರಗ್ಸ್ ಚೀಟಿಗಳನ್ನು ಮನೆಯಲ್ಲಿ ಹಾಸಿಗೆ ಕೆಳಗೆ ಬಚ್ಚಿಟ್ಟಿದ್ದನು.
ಈ ವೇಳೆ ಪೊಲೀಸ್ ಶ್ವಾನ ‘ಆದಿತಿ’ ವಾಸನೆ ಆಧಾರದ ಮೇಲೆ ಅಡಗಿಸಿದ್ದ ಡ್ರಗ್ಸ್ ಅನ್ನು ಪತ್ತೆ ಹಚ್ಚಿ ಪೊಲೀಸರಿಗೆ ಸುಳಿವು ನೀಡಿತು.
ಪೊಲೀಸರ ದಾಳಿಯಲ್ಲಿ ಸುಮಾರು 13 ಗ್ರಾಂ ಪೆನ್ನಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದ್ದು, ಅದರ ಮೌಲ್ಯ ಸುಮಾರು 2.60 ಲಕ್ಷ ಎಂದು ಅಂದಾಜಿಸಲಾಗಿದೆ. ಜೊತೆಗೆ ಆರೋಪಿಗಳಿಂದ ಎರಡು ಮೊಬೈಲ್‌ಗಳನ್ನು ಸಹ ಜಪ್ತಿ ಮಾಡಲಾಗಿದೆ.
ಈ ಪ್ರಕರಣ ಸಂಬಂಧ ನಾಗೇಶ್ ಭಗತ್ ಹಾಗೂ ರಾಹುಲ್ ಜಾಧವ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Total Views 107
RELATED ARTICLES

Most Popular

Recent Comments

KNN City News
Home
E-Paper