Monday, November 23, 2026
HomeBelagaviಜಿಲ್ಲೆಯಲ್ಲಿ ಹಿಟ್ ಸ್ಟ್ರೋಕ್ ಗೆ ಪಪಂ ಮುಖ್ಯಾಧಿಕಾರಿ ಬಲಿ

ಜಿಲ್ಲೆಯಲ್ಲಿ ಹಿಟ್ ಸ್ಟ್ರೋಕ್ ಗೆ ಪಪಂ ಮುಖ್ಯಾಧಿಕಾರಿ ಬಲಿ

 

ಬೆಳಗಾವಿ
ಜಿಲ್ಲೆಯಲ್ಲಿ ಹಿಟ್ ಸ್ಟ್ರೋಕ್‌ಗೆ ಮೊದಲ ಬಲಿ ಸಂಭವಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಬಿಸಿಲಿನ ತಾಪಕ್ಕೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ವೆಂಕಟೇಶ್ ಬಳ್ಳಾರಿ (35) ಮೃತ ವ್ಯಕ್ತಿ. ಅವರು ಮೂಲತಃ ರಾಯಬಾಗ ಪಟ್ಟಣದ ನಿವಾಸಿಯಾಗಿದ್ದರು.
ನಿನ್ನೆ ಬಸವೇಶ್ವರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಫೋಟೋ ಪೂಜೆ ಮಾಡುವ ವೇಳೆ ಏಕಾಏಕಿ ತಲೆ ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ತೀವ್ರ ಬಿಸಿಲಿನ ಪರಿಣಾಮ ಹಿಟ್ ಸ್ಟ್ರೋಕ್‌ಗೆ ಒಳಗಾಗಿ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬಿಸಿಲಿನ ತೀವ್ರತೆ ಹೆಚ್ಚಿರುವ ಹಿನ್ನೆಲೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

Total Views 348
RELATED ARTICLES

Most Popular

Recent Comments

KNN City News
Home
E-Paper