Monday, November 23, 2026
HomeBelagaviವರದಕ್ಷಿಣೆ ಕಿರುಕುಳಕ್ಕೆ ಸಂಗೀತಾ ಬಲಿ: ಕುಟುಂಬಸ್ಥರ ಆರೋಪ

ವರದಕ್ಷಿಣೆ ಕಿರುಕುಳಕ್ಕೆ ಸಂಗೀತಾ ಬಲಿ: ಕುಟುಂಬಸ್ಥರ ಆರೋಪ

ಅಥಣಿ
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿವಾಹಿತೆ ಗುರುವಾರ ಅನುಮಾನಾಸ್ಪದ ಸಾವು ಸಂಭವಿಸಿದ್ದು, ವರದಕ್ಷಿಣೆ ಕಿರುಕುಳದ ಆರೋಪ ಕೇಳಿ‌ ಬಂದಿದೆ.
ಸಂಗೀತಾ ಗಾಡಿವಡ್ಡರ ಮೃತ ಮಹಿಳೆ. ಇವರು ವೆಂಕಟೇಶ್ ಗಾಡಿವಡ್ಡರ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಗಂಡನ ಮನೆಯವರಿಂದ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಮನೆ ನಿರ್ಮಾಣಕ್ಕಾಗಿ ಲಕ್ಷ ಹಣ ತರಲು ಸಂಗೀತಾಳ ತವರು ಮನೆಗೆ ಗಂಡ ವೆಂಕಟೇಶ್ ಒತ್ತಡ ಹಾಕಿದ್ದಾನೆ ಎನ್ನಲಾಗಿದೆ. ಹಣ ನೀಡದ ಹಿನ್ನೆಲೆ ಸಂಗೀತಾಳಿಗೆ ಹಲ್ಲೆ ನಡೆಸಿ ನಂತರ ನೇಣು ಹಾಕಿ ಕೊಲೆ ಮಾಡಲಾಗಿದೆ ಎಂದು ಮೃತಳ ತಾಯಿ ದೂರಿದ್ದಾರೆ.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ತನಿಖೆಯ ಬಳಿಕ ತಿಳಿದು ಬರಲಿದೆ.

Total Views 62
RELATED ARTICLES

Most Popular

Recent Comments

KNN City News
Home
E-Paper