Thursday, November 19, 2026
HomeBelagaviಬೋರ್ ವೆಲ್ ವಿಚಾರಕ್ಕೆ ರೈತ ಹಾಗೂ ಆತನ ಮಗನ ಮೇಲೆ ತಲ್ವಾರ್ ನಿಂದ ಹಲ್ಲೆ

ಬೋರ್ ವೆಲ್ ವಿಚಾರಕ್ಕೆ ರೈತ ಹಾಗೂ ಆತನ ಮಗನ ಮೇಲೆ ತಲ್ವಾರ್ ನಿಂದ ಹಲ್ಲೆ

ಬೆಳಗಾವಿ
ಬೆಳಗಾವಿ ತಾಲೂಕಿನ ಧಾಮಣೆ ಎಸ್. ಗ್ರಾಮದಲ್ಲಿ ಬೋರ್ ವೆಲ್ ಹಾಕುವಾಗ ವಾಹನ ಬೇರೆಯವರ ಜಮೀನಿನಲ್ಲಿ ನಿಲ್ಲಿಸಿದ್ದಕ್ಕೆ ರೈತ ಹಾಗೂ ಆತನ ಮಗನ ಮೇಲೆ ತಲ್ವಾರ್ ಹಾಗೂ ಜಂಬೆಯಿಂದ ಹಲ್ಲೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಜೀವಪ್ಪ ಗಾವಡೆ ಎಂಬ ರೈತನ ಮೇಲೆ ತಲ್ವಾರ್ ಹಾಗೂ ಜಂಬೆಯಿಂದ ಹಲ್ಲೆ ಮಾಡಿದ್ದಾರೆ. ನಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಲು ಬಿಡದ ದುಷ್ಕರ್ಮಿಗಳು ನಮ್ಮ ಜಮೀನು ಕಬ್ಜಾ ಮಾಡಲು ಹುನ್ನಾರ ನಡೆಸಿದ್ದರು. ಪದೇ ಪದಣೆ ನಮ್ಮ ಮೇಲೆ ದಬ್ಬಾಳಿಕೆ ಜಮೀನು ವಶಪಡಿಸುವ ಹುನ್ನಾರ ನಡೆಸಿದ್ದರು. ಆಗಾಗ ಅವರ ನಡುವೆ ಜಗಳ ಆಗುತ್ತಿತ್ತು. ಆದರೆ ಇಂದು ಬೆಳಗ್ಗೆ ಏಕಾಏಕಿ ಬಂದು ತಲ್ವಾರ್ ಹಾಗೂ ಜಂಬೆಯಿಂದ ಹಲ್ಲೆ ಮಾಡಿದ್ದು, ಜೀವಪ್ಪ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆದಾಖಲಿಸಿದ್ದಾರೆ. ಹಲ್ಲೆ ನಡೆಸುವ ಸಾಧ್ಯತೆ ಇದೆ. ನಮಗೆ ರಕ್ಷಣೆ ನೀಡುವಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಕ್ಷಣೆ ನೀಡುವಂತೆ ಮನವಿ ಮಾಡಿದರೂ ನಮಗೆ ಸ್ಪಂದಿಸಲಿಲ್ಲ ಎಂದು ಅನಿಲ್ ಗಾವಡೆ ಆರೋಪಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 105
RELATED ARTICLES

Most Popular

Recent Comments

KNN City News
Home
E-Paper