Thursday, November 19, 2026
HomeBelagaviಪೊಲೀಸ್ ಇನ್ಸ್ಪೆಕ್ಟರ್ ಟಾರ್ಗೆಟ್ ಮಾಡ್ತಿದ್ದ ಖಿಲಾಡಿ ಲೇಡಿ ಬಂಧನ

ಪೊಲೀಸ್ ಇನ್ಸ್ಪೆಕ್ಟರ್ ಟಾರ್ಗೆಟ್ ಮಾಡ್ತಿದ್ದ ಖಿಲಾಡಿ ಲೇಡಿ ಬಂಧನ

ಬೆಳಗಾವಿ
ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳು ನನ್ನ ಮದವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಬೇದರಿಕೆ ಹಾಕಿ ಹಣ ವಸೂಲಿ ಮಾಡುವ ಸಂಚು ರೂಪಿಸುತ್ತಿದ್ದ ಮಹಿಳೆಯನ್ನು ಬಂಧಿಸಿ,‌ ರೌಡಿ ಶೀಟರ್ ತೆರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ರೇಣ್ಮಾ ಶಂಕರ ಮುತಗಾ ಎಂಬ ಮಹಿಳೆ ಏಂಟು‌ ತಿಂಗಳ ಹಿಂದೆ ಮದುವೆಯಾಗಿ ಮೋಸ ಮಾಡಿ ಓಡಿ ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು. ತುಮಕೂರಿನಲ್ಲಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಕಲ್ಯಾಣ ಎಂಬ ವ್ಯಕ್ತಿ ಮ್ಯಾಟ್ರಮೊನಿಯಲ್ಲಿ ಪರಿಚಯವಾಗಿ ಮದುವೆಯಾಗಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ ಮೇಲೆ ಪ್ರಕರಣ ದಾಖಲಿಸಲು ಹಿಂದೆಟ್ಟು ಹಾಕಿ ಪೊಲೀಸ್ ಇನ್ಸ್ಪೆಕ್ಟರ್ ಗೆ ವಾಟ್ಸಪ್ ಕಾಲ್ ಮಾಡುವ ರೀತಿ ಎರಡು ವಾಟ್ಸಪ್ ಮೂಲಕ ನಾನು ಒಂದು ಲಕ್ಷ ಕೊಟ್ಟಿದ್ದೇನೆ ಯಾಕೆ ನನ್ನ ಕೆಲಸ ಮಾಡುತ್ತಿಲ್ಲ ಎಂದು ಮೆಸೇಜ್ ಮಾಡುತ್ತಾರೆ ಎಂದರು.
ಬಳಿಕ ನನ್ನ ಬಳಿ ಬಂದು ದೂರು ನೀಡಿದಾಗ ಪೊಲೀಸ್ ಇನ್ಸ್ಪೆಕ್ಟರ್ ಕರೆಸಿ ವಿಚಾರಿಸಿದಾಗ ಸರ್ ನನ್ನ ಮೊಬೈಲ್ ಫಾರಿನ್ ಸಿಕ್ ರಿಪೋರ್ಟ್ ಕಳಸಿ ಈ ಮಹಿಳೆ ಸುಳ್ಳು ಹೇಳುತ್ತಿದ್ದಾಳೆ. ಈಕೆ ನಗರ ಪೊಲೀಸ್ ಠಾಣೆಯ ವಿವಿಧ ಕಡೆ ಇದೇ ರೀತಿ ಮಾಡಿದ್ದಾಳೆ ಎಂದಾಗ ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ ನೇತೃತ್ವದಲ್ಲಿ ತನಿಖೆ ಮಾಡಿಸಿದಾಗ ಐದು ವಿಚಾರದಲ್ಲಿ ಬೇರೆ ಬೇರೆ ಕಡೆ ಮಾಡದ್ದಾಳೆ ಎಂದರು.
2012ರಲ್ಲಿ ಕುಡಚಿ ಪೊಲೀಸ್ ಠಾಣೆಯಲ್ಲಿ ಪಕ್ಕದ ಮನೆಯವರು ಪರಿಚಯವಾಗಿ ಮದವೆಯಾಗುವುದಾಗಿ ಮೋಸ, 2022ರಲ್ಲಿ ಘಟಪ್ರಭಾದಲ್ಲಿ ನಾಗರಾಜ ಗದಗ ಪೊಲೀಸ್ ಪೇದೆಯ ಮೇಲೆ ಅವರು ನನ್ನ ಗಂಡ ನನ್ನ ಬಿಟ್ಟು ಹೋಗಿದ್ದಾರೆ, 2023ರಲ್ಲಿ ಗಜೇಂದ್ರಗಡದ ಆಕಾಶ ಎಂಬುವ ಅತ್ಯಾಚಾರ ಮಾಡಿದ್ದಾನೆ ಎಂದು ದೂರು, ಇತ್ತೀಚೆಗೆ 2025ರ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುರೇಶ್ ಎಂಬುವರು ಮೋಸ ಮಾಡಿದ್ದಾರೆ ಎಂದು ಧಾರವಾಡ‌ ಸಬ್ ಅರಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಇಲ್ಲಿನ ಇನ್ಸ್ಪೆಕ್ಟರ್ ಮೇಲೂ ಕೇಸ್ ಕೊಟ್ಟಿದ್ದಾಳೆ.
ಈಕೆ ಕೇವಲ ಒಬ್ಬಾಕೆಯಲ್ಲ ಈಕೆಯ ಹಿಂದೆ ಕೆಲವರು ಇರುವುದು ಶಂಕೆ ಇದೆ. ಈಕೆಗೆ ಸಹಾಯ ಮಾಡಿದವರ ಮೇಲು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Total Views 1080
RELATED ARTICLES

Most Popular

Recent Comments

KNN City News
Home
E-Paper