Monday, November 23, 2026
HomeBelagaviಕರವೇ ಜಿಲ್ಲಾಧ್ಯಕ್ಷನಿಗೆ ಶಾಕ್ ಕೊಟ್ಟ ಸಿಐಡಿ

ಕರವೇ ಜಿಲ್ಲಾಧ್ಯಕ್ಷನಿಗೆ ಶಾಕ್ ಕೊಟ್ಟ ಸಿಐಡಿ

ಬೆಳಗಾವಿ
ಕಳೆದ ಡಿಸೆಂಬರ್ 27 ರಂದು ಬೆಳಗಾವಿಯ ಸರದಾರ್ಸ್ ಮೈದಾನದಲ್ಲಿ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಬಳಿ ಪ್ರಾಯೋಜಕತ್ವದಲ್ಲಿ ಬೆಳಗಾವಿ ಉತ್ಸವ ಮಾಡಿಸಿ 1.5 ಕೋಟಿ ರೂ. ಸಾರ್ವಜನಿಕರ ಠೇವಣಿ ಹಣದಿಂದ ಕರ್ನಾಟಕ‌ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಐಷಾರಾಮಿ ಕಾರ್ ಉಡುಗೊರೆಯಾಗಿ ಪಡೆದ್ದನ್ನು ತನಿಖೆಗೆ ಒಳಪಡಿಸಲು ಸಿಐಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಠೇವಣಿದಾರರ ಹೂಡಿಕೆಯ ಹಣದಿಂದಲೇ ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಐಷಾರಾಮಿ ‌ಕಾರ್ ಉಡುಗೊರೆ ಪಡೆದಿದ್ದಾರೆ ಎನ್ನುವ ಶಂಕೆಯ ಮೆರೆಯೆ ಸಿಐಡಿ ಅಧಿಕಾರಿಗಳು ಕಾರ್ ತನಿಖೆಗೆ ಬೇಕಾಗುತ್ತದೆ. ಅದನ್ನು ಸಿಐಡಿಗೆ ಹಸ್ತಾಂತರ ಮಾಡಬೇಕೆಂದು ಅಭಿಲಾಷ್ ಗೆ ತಾಕೀತು ಮಾಡಿದ್ದಾರೆ.


ಐಶಾರಾಮಿ ಕಾರು ಉಡುಗೊರೆ ಪಡೆದಿದ್ದನ್ನು ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಅಭಿಲಾಷ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಹಂಚಿಕೊಂಡಿದ್ದರು. ಯಾವಾಗ ಉಡುಗೊರೆ ಪಡೆದವರಿಗೂ ಕಂಟಕ ಎಂದು ತಿಳಿದು ಬಂದಾಗ ಆ ಪೋಸ್ಟ್ ಡಿಲಿಟ್ ಮಾಡಿದ್ದರು.


ಇನ್ನೂ ಸ್ವಚ್ಚ ಬೆಳಗಾವಿ ಸಂಭ್ರಮದಲ್ಲಿಯೂ ಆಯೋಜಕರಿಗೆ ಉಡುಗೊರೆಯೊಂದನ್ನು ಕಾರ್ ನೀಡುವುದಾಗಿ ಠೇವಣಿ ‌ವಂಚಕ ಶಿವಾನಂದ ನೀಲಣ್ಣವರ ಭರವಸೆ‌ ನೀಡಿದ್ದ ಎನ್ನಲಾಗಿದೆ. ಕಾರು ಉಡುಗೊರೆ ‌ನೀಡಿದ್ದಾರೋ ಇಲ್ಲವೋ ಎಂಬುದು ತನಿಖೆಯಿಂದ ತಿಳಿದು ಬರಲಿದೆ.
ಆರ್. ಅಭಿಲಾಷ್ ನೀಲಣ್ಣವರನಿಂದ ಐಷಾರಾಮಿ ಕಾರು ಉಡುಗೊರೆ ‌ಪಡೆದಿರುವುದ‌ನ್ನು ಕನ್ನಡಮ್ಮ ದಿನಪತ್ರಿಕೆ ಪ್ರಕಟಿಸಿ ತನಿಖಾಧಿಕಾರಿಗಳಿಗೆ ಸಹಾಯ ಮಾಡಿದ್ದು ಸ್ಮರಿಸಬಹುದು.

Total Views 566
RELATED ARTICLES

Most Popular

Recent Comments

KNN City News
Home
E-Paper