Monday, November 23, 2026
HomeBelagaviಕಾರ್ ಬಾಡಿಗೆ ಪಡೆಯಲು‌ ಹೋಗಿ ಸೈಬರ್ ವಂಚನೆಗೆ ಒಳಗಾದ ಶಿರಸ್ತೆದಾರ

ಕಾರ್ ಬಾಡಿಗೆ ಪಡೆಯಲು‌ ಹೋಗಿ ಸೈಬರ್ ವಂಚನೆಗೆ ಒಳಗಾದ ಶಿರಸ್ತೆದಾರ

ಬೆಳಗಾವಿ
ಕಾರ್ ಬುಕ್ ಆ್ಯಪ್ ಅಥವಾ ಆನ್‌ಲೈನ್ ಮೂಲಕ ಕಾರ್ ಬಾಡಿಗೆ ಪಡೆಯುವವರೇ ಎಚ್ಚರ.‌ಸ್ವಲ್ಪ ಮೈಮರೆತರೂ ಸೈಬರ್ ವಂಚಕರ ಬಲೆಗೆ ಬೀಳುವುದು ಗ್ಯಾರಂಟಿ. ಆನ್‌ಲೈನ್‌ನಲ್ಲಿ ಕಾರ್ ಬಾಡಿಗೆ ಬುಕ್ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 99 ಸಾವಿರ ರೂಪಾಯಿ ಹಣವನ್ನು ವಂಚಕರು ಎಗರಿಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶಿರಸ್ತೆದಾರರಾಗಿರುವ ಸಂಜೀವ್ ಮುತ್ತೆಪ್ಪಗೋಳ ಅವರು ವಂಚನೆಗೆ ಒಳಗಾದವರು. ಮಾರ್ಚ್ 27ರಂದು ಬಾಡಿಗೆ ಆಧಾರದಲ್ಲಿ ಕಾರ್ ಬುಕ್ ಮಾಡಲು ಇವರು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ “ಲಕ್ಷ್ಮೀ ಕಾರ್ ರೆಂಟಲ್ ಗೋವಾ” ಎಂಬ ವೆಬ್‌ಸೈಟ್‌ಗೆ ಸಂಬಂಧಿಸಿದ ನೀಲಂ ರಜಪೂತ್ ಎಂಬಾತನನ್ನು ಸಂಪರ್ಕಿಸಿದ್ದಾರೆ.
ಬೆಳಗಾವಿ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಕಾರ್ ಬೇಕೆಂದು ವಿಚಾರಿಸಿದಾಗ, 800 ರೂ. ಬಾಡಿಗೆ ಆಗುತ್ತದೆ. ಮೊದಲು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕಾರ್ ಬುಕ್ ಮಾಡಬೇಕೆಂದು ತಿಳಿಸಿದ್ದಾನೆ. ಬಳಿಕ “ಕಾರ್ ರೆಂಟಲ್” ಹೆಸರಿನ ಆ್ಯಪ್ ಲಿಂಕ್‌ನ್ನು ಕಳುಹಿಸಿದ್ದಾನೆ.
ಆತನ ಸೂಚನೆಯಂತೆ ಸಂಜೀವ್ ಅವರು ಆ್ಯಪ್ ಡೌನ್‌ಲೋಡ್ ಮಾಡಲು ಪ್ರಯತ್ನಿಸಿದರೂ ಅದು ಸರಿಯಾಗಿ ಡೌನ್‌ಲೋಡ್ ಆಗಿರಲಿಲ್ಲ. ನಂತರ ವಂಚಕನ ಸೂಚನೆಯಂತೆ ಫೋನ್‌ಪೇ ಮೂಲಕ 149 ರೂ. ಪಾವತಿಸಿದ್ದಾರೆ. ಆದರೂ ಕಾರ್ ಬುಕ್ಕಿಂಗ್ ಖಚಿತವಾಗದ ಹಿನ್ನೆಲೆಯಲ್ಲಿ ಮತ್ತೆ ವಂಚಕನಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ.
ಈ ವೇಳೆ ಆ್ಯಪ್ ಡೌನ್‌ಲೋಡ್ ಪ್ರಕ್ರಿಯೆ ತಿಳಿಸುವ ನೆಪದಲ್ಲಿ ಗೂಗಲ್ ಮೀಟ್ ಮೂಲಕ ಮೊಬೈಲ್ ಸ್ಕ್ರೀನ್ ಶೇರ್ ಮಾಡುವಂತೆ ಹೇಳಿದ್ದಾನೆ. ದೂರುದಾರರು ತಿಳಿಯದಂತೆ ಅವರ ಮೊಬೈಲ್ ಹಾಗೂ ಬ್ಯಾಂಕ್ ವಿವರಗಳಿಗೆ ಪ್ರವೇಶ ಪಡೆದ ವಂಚಕ, ಖಾತೆಯಲ್ಲಿದ್ದ 99 ಸಾವಿರ ರೂ. ಹಣವನ್ನು ಎಗರಿಸಿದ್ದಾನೆ. ಈ ಕುರಿತು ಬೆಳಗಾವಿ ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Total Views 297
RELATED ARTICLES

Most Popular

Recent Comments

KNN City News
Home
E-Paper