
ಬೆಳಗಾವಿ
ಚೂರಿಯಿಂದ ಬರ್ಬರವಾಗಿ ಕೊಲೆಯಾಗಿದ್ದ ಯುವಕನೋರ್ವನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ.
ಮೂಡಲಗಿ ಪಟ್ಟಣದಲ್ಲಿ ವಡ್ಡರ ಓಣಿಯ ಕಳಸನ್ನವರ ಪ್ಲಾಟ್ ದಲ್ಲಿ ತಿಮ್ಮಣ್ಣ ವಿಠ್ಠಲ್ ಬಂಡಿವಡ್ಡರ ಎಂಬ ಯುವಕನಗೆ ಚೂರಿ ಇರಿದು ಕೊಲೆ ಮಾಡಲಾಗಿತ್ತು, ಅದರ ಜಾಡು ಹಿಡಿದ ಪೊಲೀಸರಿಗೆ ಈ ಕೊಲೆಯನ್ನು ಮಾಡಿರುವ ಹಂತಕರು ಯಾರು ಎಂಬ ಪ್ರಶ್ನೆಯಾಗಿತ್ತು.
ಬಳಿಕ ಹತ್ಯೆಗೈದ ಹಂತಕರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರೆಸಿದಾಗ, ಪೊಲೀಸರಿಗೆ ಬಿಗ್ ಟ್ವಿಸ್ಟೊಂದು ದೊರಕಿದೆ ಎನ್ನಲಾಗಿದೆ. ಕೊಲೆಯಾದ ಯುವಕ ಫೋನ್ ಗೆ ಕೊನೆದಾಗಿ ಕರೆ ಬಂದಿದ್ದ ವ್ಯಕ್ತಿಯನ್ನು ಬೆನ್ನಟಿದ ಪೊಲೀಸರಿಗೆ ಕೊಲೆಗೆ ನಿಖರ ಕಾರಣ ಹಾಗೂ ಹಂತಕರು ಯಾರು ಎಂಬ ಮಾಹಿತಿ ಲಭ್ಯವಾಗಿದ್ದು, ಕೊಲೆಯಾದ ಯುವಕನ ಲವ್ ಕಹಾನಿ ಬಯಲಾಗಿದ್ದು ಎನ್ನಲಾಗಿದೆ.
ಕೊಲೆಗೆ ಸಂಕು ರೂಪಿಸಿದ ಪ್ರೇಯಸಿ ಅಣ್ಣ: ತಿಮ್ಮಣ್ಣ ತಮ್ಮ ಸಂಬಂಧಿಕರ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ, ಈ ವಿಷಯ ತಿಳಿದು ಹುಡುಗಿಯ ಮನೆಯವರು ಅವಳಿಗೆ ಬೇರೆಯೊಂದು ಮದುವೆ ಮಾಡಿದ್ದರು. ಆದರೇ ಆ ಯುವತಿ ಮದುವೆಯಾದರೂ ತಿಮ್ಮಣ್ಣನ ಜೊತೆಗೆ ಸಂಪರ್ಕದಲ್ಲಿದ್ದಳೆಂದು ಯುವತಿಯ ದೊಡ್ಡಪ್ಪನ ಮಗ ತನ್ನ ಗೆಳೆಯರೊಂದಿಗೆ ಕೊಲೆ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ಆರೋಪಿಗಳಾದ ನಾಲ್ಕು ಜನರಲ್ಲಿ ಮೂವರು ಅಪ್ರಾಪ್ತರು ಎನ್ನಲಾಗುತ್ತಿದೆ.
ಇನ್ನೂ ಆ ಯುವತಿಯ ಮನೆಯವರು ಸಹ ಕೊಲೆಯಾದ ತಡರಾತ್ರಿ ಮನೆ ಬಿಟ್ಟು ಪರಾರಿಯಾಗಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ಪೊಲೀಸ್ ಅಧಿಕಾರಿಗಳಿಗೆ ಲಭ್ಯವಾದ ಮಾಹಿತಿ ಮೇರಿಗೆ ಪರಿಶೀಲನೆ ನಡೆಸಿರುವ ಘಟನೆ ಜರುಗಿದೆ.
ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳು ತಮ್ಮ ಕಾರ್ಯಾಚರಣೆ ತುರುಕುಗೊಳಿಸಿದ್ದಾರೆ.
