Monday, November 23, 2026
HomeBelagaviಬುಡಾದಲ್ಲಿ ಅಕ್ರಮ ನೇಮಕಾತಿ: ಅಶೋಕ್ ಗೆ ಶಾಕ್

ಬುಡಾದಲ್ಲಿ ಅಕ್ರಮ ನೇಮಕಾತಿ: ಅಶೋಕ್ ಗೆ ಶಾಕ್

ಬೆಳಗಾವಿ
ಬುಡಾನಲ್ಲಿ ಅಶೋಕ ಹಲಗಲಿ ಅವರನ್ನು ಯಾವುದೇ ಕಾನೂನುಬದ್ಧ ನೇಮಕಾತಿ ಆದೇಶ, ಅಧಿಸೂಚನೆ ಅಥವಾ ಅನುಮೋದಿತ ಆಯ್ಕೆ ಪ್ರಕ್ರಿಯೆಯಿಲ್ಲದೆ ಪ್ಯಾನಲ್ ಅಡ್ವಕೇಟ್, ಕಾನೂನು ಸಲಹೆಗಾರ ಅಥವಾ ಕಾನೂನು ಅಧಿಕಾರಿಯಾಗಿ ನೇಮಕ ಮಾಡಿರುವ ಕುರಿತು ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮೂರು ದಿನದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೋಟಿಸ್ ಜಾರಿ ಮಾಡಿದ್ದಾರೆ.
ಈ ಕುರಿತು ಬೆಳಗಾವಿಯ ಶ್ರೀನಿವಾಸ ರಾವ್ ಸಲ್ಲಿಸಿದ ದೂರಿನ ಮೇರೆಗೆ, ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸೂಚಿಸಲಾಗಿದೆ.
ದೂರಿನಲ್ಲಿ, ನೇಮಕಾತಿ ಕಾನೂನುಬಾಹಿರವೆಂದು ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯ್ದೆ, ಸೇವಾ ನಿಯಮಗಳು ಹಾಗೂ ಇತರೆ ದಂಡಾತ್ಮಕ ಕಾನೂನುಗಳಡಿ ಕ್ರಿಮಿನಲ್ ಮತ್ತು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಇನ್ನೂ ಗಂಭೀರ ಸಂಗತಿಯೆಂದರೆ, ಈ ನೇಮಕಾತಿ ಸಂಬಂಧಿತ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ ಮಾಹಿತಿ ಹಕ್ಕು ಅಧಿನಿಯಮದಡಿ ತಪ್ಪು ಹಾಗೂ ಅಪೂರ್ಣ ಉತ್ತರ ನೀಡಿರುವ ಆಡಳಿತ ಶಾಖೆಯ ವ್ಯವಸ್ಥಾಪಕರ ಮೇಲೂ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿತ ಕಚೇರಿಗೆ ಈಗಾಗಲೇ ಹಲವು ಬಾರಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದ್ದರೂ, ಈವರೆಗೂ ಯಾವುದೇ ಸ್ಪಷ್ಟ ವರದಿ ಸಲ್ಲಿಕೆಯಾಗಿಲ್ಲ. ಇದರಿಂದ ಮೇಲಾಧಿಕಾರಿಗಳ ಆದೇಶ ನಿರ್ಲಕ್ಷ್ಯಗೊಂಡಿರುವುದು ಸ್ಪಷ್ಟವಾಗಿದೆ.
ಹೀಗಾಗಿ, ನೋಟಿಸ್ ತಲುಪಿದ ಮೂರು ದಿನಗಳೊಳಗಾಗಿ ತಮ್ಮ ಹೇಳಿಕೆ, ಸ್ಪಷ್ಟ ಅಭಿಪ್ರಾಯ ಹಾಗೂ ಅಗತ್ಯ ದಾಖಲೆಗಳೊಂದಿಗೆ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

Total Views 76
RELATED ARTICLES

Most Popular

Recent Comments

KNN City News
Home
E-Paper