Monday, November 23, 2026
HomeBelagaviಇಡಿ ದಾಳಿ ಬಳಿಕ ಬೆಳಗಾವಿಗೆ ಬಂದ ಸಾಹುಕಾರ್ ಅಳಿಯ

ಇಡಿ ದಾಳಿ ಬಳಿಕ ಬೆಳಗಾವಿಗೆ ಬಂದ ಸಾಹುಕಾರ್ ಅಳಿಯ

ಬೆಳಗಾವಿ
ಸಚಿವ ಸತೀಶ್ ಜಾರಕಿಹೊಳಿ ಅವರ ಅಳಿಯನ ಮನೆ ಮೇಲೆ ಇಡಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್ ಗುರುವಾರ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದರು.
ಬೆಳಗಾವಿಯ ಟಿವಿ ಸೆಂಟರ್ ಪ್ರದೇಶದಲ್ಲಿರುವ ತಮ್ಮ ನಿವಾಸಕ್ಕೆ ಸರ್ಕಾರಿ ಕಾರಿನಲ್ಲೇ ವೈ. ಮಂಜುನಾಥ್ ಆಗಮಿಸಿದರು. ಇಡಿ ಅಧಿಕಾರಿಗಳು ಶೋಧ ಕಾರ್ಯ ಮುಗಿಸಿ ವಾಪಸ್ ತೆರಳಿದ ಕೆಲವೇ ಹೊತ್ತಿನಲ್ಲಿ ಅವರ ಮನೆಗೆ ಬಂದರು.
ಬುಧವಾರ ಬೆಂಗಳೂರಿನ ನಿವಾಸದಲ್ಲಿದ್ದ ಮಂಜುನಾಥ್ ಇಂದು ಕಾರಿನ ಮೂಲಕ ಬೆಳಗಾವಿಗೆ ತಲುಪಿದ್ದಾರೆ. ಇಡಿ ದಾಳಿ ಬಳಿಕ ಅವರ ಆಗಮನ ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಚಿತ್ತ ನೆಟ್ಟಿದೆ.

Total Views 102
RELATED ARTICLES

Most Popular

Recent Comments

KNN City News
Home
E-Paper