Monday, November 23, 2026
HomeBelagaviಆರ್ ಎಸ್ ಎಸ್ ನೋಂದಣಿ ಚರ್ಚೆಯ ನಡುವೆ ಬೆಳಗಾವಿಯಲ್ಲಿ ಶಿಸ್ತಿನ ಬೈಠಕ್ ಆರಂಭ

ಆರ್ ಎಸ್ ಎಸ್ ನೋಂದಣಿ ಚರ್ಚೆಯ ನಡುವೆ ಬೆಳಗಾವಿಯಲ್ಲಿ ಶಿಸ್ತಿನ ಬೈಠಕ್ ಆರಂಭ

 

ಬೆಳಗಾವಿ
ಆರ್ ಎಸ್ ಎಸ್ ಮೂರು ದಿನಗಳ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್ ಶುಕ್ರವಾರ ನಗರದ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಪ್ರಾರಂಭವಾಯಿತು.
ಬೈಠಕ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗವಹಿಸಿದ್ದರು. ಈ ವೇಳೆ ಎಲ್ಲಾ ಸಹಸರಕಾರ್ಯವಾಹರು, ಕಾರ್ಯವಿಭಾಗಗಳ ಅಖಿಲ ಭಾರತೀಯ ಪ್ರಮುಖರು, ಸಹ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರೀಯ ಪ್ರಚಾರಕರು, ಸಹ ಕ್ಷೇತ್ರೀಯ ಪ್ರಚಾರಕರು, ಎಲ್ಲಾ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಬೈಠಕ್‌ ನಲ್ಲಿ 2026ರ ನಂತರ ವಿಭಿನ್ನ ಸ್ತರಗಳಲ್ಲಿ ಸಂಪನ್ನಗೊಂಡ ಸಂಘದ ಪ್ರಶಿಕ್ಷಣ ವರ್ಗಗಳ ವೃತ್ತಾಂತ ಹಾಗೂ ಶಾಖೆಯ ಸ್ತರದಲ್ಲಿ ಕಾರ್ಯಯೋಜನೆಯ ಕ್ರಿಯಾನ್ವಯದ ದೃಷ್ಟಿಯಿಂದ ವಿಸ್ತಾರವಾಗಿ ಚರ್ಚೆ ನಡೆಸಲಾಯಿತು. ಸಂಘ ಶತಾಬ್ದಿಯ ನಿಮಿತ್ತ ನಡೆದ ಶಾಖಾ ಕಾರ್ಯವಿಸ್ತಾರದ ಕುರಿತು ವರದಿ ಮತ್ತು ಮುಂದಿನ ಶಾಖಾ ವಿಸ್ತಾರದ ಯೋಜನೆಗಳ ಕುರಿತು ಮುಖ್ಯಸ್ಥರು ಮಾಹಿತಿ ಪಡೆದುಕೊಂಡರು.
ಜೊತೆಗೆ ಸಂಘ ಶತಾಬ್ದಿಯ ನಿಮಿತ್ತ ಸಂಪನ್ನಗೊಂಡ ಕಾರ್ಯಕ್ರಮಗಳ ವರದಿ ಮತ್ತು ನಿಧಾರಿತ ಉಳಿದ ಕಾರ್ಯಕ್ರಮಗಳ ಕುರಿತು ಯೋಜನೆ, ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ 2026-27ರ ಪ್ರವಾಸದ ಯೋಜನೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಿತು. ಅಷ್ಟೇ ಅಲ್ಲದೆ ಸಂಘ ಶತಾಬ್ದಿಯ ಉಳಿದ ಕಾರ್ಯಕ್ರಮಗಳು ಮುಂದಿನ ವಿಜಯದಶಮಿ ಉತ್ಸವ 20 ಅಕ್ಟೋಬರ್, 2026 ರ ವರೆಗೆ ನಡೆಯಲಿವೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

Total Views 79
RELATED ARTICLES

Most Popular

Recent Comments

KNN City News
Home
E-Paper