Monday, November 23, 2026
HomeBelagaviಗಣೇಶೋತ್ಸವದಕ್ಕೆ ಡಿಜೆಗೆ ಅವಕಾಶ ಇಲ್ಲ: ಬೊರಸೆ

ಗಣೇಶೋತ್ಸವದಕ್ಕೆ ಡಿಜೆಗೆ ಅವಕಾಶ ಇಲ್ಲ: ಬೊರಸೆ

ಬೆಳಗಾವಿ

ಗಣೇಶೋತ್ಸವದಂದು ಡಿಜೆ ಬಳಸಲು ಅನುಮತಿ ಇಲ್ಲ. ಎಲ್ಲರೂ ಸೌಹಾರ್ದವಾಗಿ ಹಬ್ಬ ಆಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.
ಗುರುವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಳೆದ ಬಾರಿಯ ಗಣೇಶೋತ್ಸವದ ವೇಳೆಯೂ ಡಿಜೆ ಅನುಮತಿ ನೀಡಿರಲಿಲ್ಲ. ಹಿರಿಯ ನಾಗರಿಕರು ಪೊಲೀಸ್ ಇಲಾಖೆಯ ಕ್ರಮವನ್ನು ಶ್ಲಾಘಿಸಿದ್ದಾರೆ ಎಂದರು.
ಬೆಳಗಾವಿ ಸಾರ್ವಜನಿಕ ಗಣೇಶಗಳನ್ನು 12 ಅಡಿ ಮಾತ್ರ ಅನುಮತಿ ನೀಡಲಾಗಿದೆ. ಪೆಂಡಾಲ್ ವಿನ್ಯಾಸ್ ಹೆಚ್ಚು ಮಾಡಬೇಡಿ. ದೊಡ್ಡ ದೊಡ್ಡ ಗಣೇಶ ಮೂರ್ತಿ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಹುಕ್ ಕಡ್ಡಾಯವಾಗಿರಬೇಕು. ಗಣೇಶ ಮೂರ್ತಿಗಳಿಗೆ ಹುಕ್ ಅಳವಡಿಸಲು ಗಣೇಶ ಮಂಡಳಿಗಳು ಮೂರ್ತಿಕಾರರಿಗೆ ಹೇಳಿದರೆ ನಮಗೆ ವಿಸರ್ಜನೆಯ ವೇಳೆ ಬೇಗ ಮುಗಿಸಲು ಸಹಾಯವಾಗುತ್ತದೆ ಎಂದರು.
ಬೆಳಗಾವಿ ನಗರದಲ್ಲಿ 14 ಲಕ್ಷ ಜನರಿದ್ದಾರೆ. ಗಣೇಶೋತ್ಸವ ಇದ್ದರೂ ಇಲ್ಲದಿದ್ದರೂ ನಾನು ಪೊಲೀಸ್ ಬಂದೋಬಸ್ತ ಮಾಡಬೇಕು. ಸಂಚಾರ ದಟ್ಟಣೆ ನಿಯಂತ್ರಣ ಮಾಡುವ ಕೆಲಸ ಸುಲಭವಲ್ಲ. ಪೊಲೀಸರಿಗೆ ಗಣೇಶೋತ್ಸವದ ಮಂಡಳದವರು ಸಹಕಾರ ಕೊಡಬೇಕು ಎಂದರು.
ಗಣೇಶೋತ್ಸವದ ವೇಳೆ ಎಲ್ಲ ಮಂಡಳಗಳಲ್ಲಿ ಒಬ್ಬ ಸಿಬ್ಬಂದಿ ನೇಮಕ ಮಾಡಲಾಗುವುದು. ಪೆಂಡಾಲ್ ನಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಕಡ್ಡಾಯ. ಇದರಿಂದ ಸರಗಳ್ಳತನ, ಜೇಬುಗಳ್ಳತನ ತಡೆಯಲು ಸಹಾಯವಾಗುತ್ತದೆ. ಹಾಡು ಹಾಕುವಾಗ ಅಶ್ಲೀಲ ಹಾಡುಗಳನ್ನು ಹಾಕುವಂತಿಲ್ಲ. 10 ಗಂಟೆಗಳ ಬಳಿಕ ಯಾವುದೇ ‌ಸೌಂಡ್ ಮಾಡುವಂತಿಲ್ಲ. ಗಣೇಶೋತ್ಸವ ಮಂಡಳಿ ಪಾಲಿಸಬೇಕು ಎಂದರು.

Total Views 61
RELATED ARTICLES

Most Popular

Recent Comments

KNN City News
Home
E-Paper