Monday, November 23, 2026
HomeBelagaviಧಾರವಾಡಕ್ಕೆ ಭೂಷಣ್ ಕಮಿಷ್ನರ್, ಬೆಳಗಾವಿಗೆ ನಿಕ್ಕಂ

ಧಾರವಾಡಕ್ಕೆ ಭೂಷಣ್ ಕಮಿಷ್ನರ್, ಬೆಳಗಾವಿಗೆ ನಿಕ್ಕಂ

ಬೆಳಗಾವಿ
ಲಾಕ್ಡ್ ಹೌಸ್ ಸಿಸ್ಟಮ್ ಜಾರಿಗೆ ತಂದು ಮನೆಗಳ್ಳತನ ಪ್ರಕರಣವನ್ನು ತಡೆಗಟ್ಟಿ ರಾಜ್ಯದ ಇತರೆ ನಗರ ಪೊಲೀಸ್ ಆಯುಕ್ತಾಲಯಗಳಿಗೆ ಅಳವಡಿಸುವಂತೆ ಮಾಡಿ ಜನ ಸ್ನೇಹಿ ಆಡಳಿತಕ್ಕೆ ಒತ್ತು ನೀಡಿದ್ದ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರಾಗಿ ವರ್ಗಾವಣೆಯಾಗಿದ್ದು, ಬೆಳಗಾವಿ ನೂತನ ಪೊಲೀಸ್ ಆಯುಕ್ತರಾಗಿ ನಿಕ್ಕಂ ಪ್ರಕಾಶ ಅಮೃತ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಬೆಳಗಾವಿ ನಗರದಲ್ಲಿ ಮನೆಗಳ್ಳತನ ಪ್ರಕರಣಗಳನ್ನು ತಡೆಯುವಲ್ಲಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರ ಮಾಸ್ಟರ್ ಯೋಜನೆಯನ್ನು ಪೊಲೀಸ್ ಮಹಾನಿರ್ದೇಶಕರು ಪ್ರಶಂಸೆ ವ್ಯಕ್ತಪಡಿಸಿ ಇಡೀ ರಾಜ್ಯದ ನಗರ ಪೊಲೀಸ್ ಆಯುಕ್ತಾಲಯದಲ್ಲಿ ಅಳವಡಿಸುವಂತೆ ಸೂಚನೆ‌ ನೀಡಿದ್ದು ಬೆಳಗಾವಿಗೆ ನಗರಕ್ಕೆ ಮಾದರಿಯಾಗಿತ್ತು.
ಬೆಳಗಾವಿ ನಗರದಲ್ಲಿ ಗಾಂಜಾ ಹಾವಳಿಗೆ ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ದಟ್ಟಣೆ ‌ನಿಯಂತ್ರಣ ಮಾಡುವಲ್ಲಿ ನಗರ ಪೊಲೀಸ್ ಇಲಾಖೆಯ ಸಿಬ್ಬಂದಿಗಳೊಂದಿಗೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದ ರೀತಿ ಜನ ಮೆಚ್ಚುಗೆಗೆ ಪಾತ್ರವಾಗಿತ್ತು.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ, ಕರ್ನಾಟಕ ರಾಜ್ಯೋತ್ಸವದ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದು ಜನಮನ್ನಣೆಗಳಿಸಿದ್ದ ಬೊರಸೆ ಅವರನ್ನು ಸರಕಾರ ಹುಬ್ಬಳ್ಳಿ- ಧಾರವಾಡಕ್ಕೆ ವರ್ಗಾವಣೆ ಮಾಡಿದೆ. ಬೊರಸೆ ಅವರು ಮಾಡಿದ ಕೆಲಸ ಬೆಳಗಾವಿ ನಗರದ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ.

Total Views 162
RELATED ARTICLES

Most Popular

Recent Comments

KNN City News
Home
E-Paper