Monday, November 23, 2026
HomeBelagaviಇಡಿ ದಾಳಿ ಬಗ್ಗೆ ಸಾಹುಕಾರ್ ಹೇಳಿದ್ದೇನು ?

ಇಡಿ ದಾಳಿ ಬಗ್ಗೆ ಸಾಹುಕಾರ್ ಹೇಳಿದ್ದೇನು ?

ಬೆಂಗಳೂರು
ಇಡಿ ದಾಳಿ ವಿಚಾರವಾಗಿ ನನಗೆ ನೋಟಿಸ್ ಕೊಟ್ಟಿದ್ದರೇ ಆಗುತ್ತಿತ್ತು. ರಾಜಕೀಯ ಇದೆಯಾ ಎನ್ನುವ ವಾಸನೆ ಬರುತ್ತಿದೆ. ಇದು ಚರ್ಚೆಗೆ ಗ್ರಾಸವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇಡಿ ದಾಳಿ ಮಾಡಿಕೊಂಡು ಹೋಗಿದ್ದಾರೆ. ಮುಂದಿ‌ನ ಅವರ ತನಿಖೆಯ ಆಯಾಮದ ಮೇಲೆ ತಿಳಿದು ಬರುತ್ತದೆ. ಒಂದು ಕೋಟಿಯಿಂದ ಎರಡು ಕೋಟಿ ರೂ. ಹಣ ಸಿಕ್ಕಿದೆ. ಅದು ನಮ್ಮದೆ. ಅದನ್ನು ವಾಪಸು ಪಡೆಯಲು ದಾಖಲೆ ಕೊಡುತ್ತೇವೆ. ಕೆಲ ಪತ್ರ ವಶಡಿಸಿಕೊಂಡಿದ್ದಾರೆ. ನೋಟಿಸ್ ನೀಡಿದ ಮೇಲೆ ಉತ್ತರ ಕೊಡುತ್ತೇನೆ ಎಂದರು.
ಇಡಿ ದಾಳಿ ನಮಗೆ ಗೊತ್ತಿಲ್ಲದೆ ಇರೋ ವಿಚಾರವೇನಲ್ಲ. ಈ ಹಿಂದೆ ಕೂಡ ಜಾರಕಿಹೊಳಿಯವರ ನಿವಾಸಗಳ ಮೇಲೆ ಇಡಿ ದಾಳಿ ನಡೆದಿದೆ. ಸತೀಶ್ ಜಾರಕಿಹೊಳಿ ಅವರು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಯಾವುದೇ ತನಿಖೆ ನಡೆಸಿದರೂ ಅವರು ಉತ್ತರ ನೀಡುತ್ತಾರೆ. ಯಾರು ಏನು ಗಾಬರಿ ಪಡಬೇಕಾಗಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಗಳು ಹೇಳಿದಂತೆ ನಮ್ಮ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಕೊನೆಯದಾಗಿ ಈ ದಾಳಿ ನಮ್ಮ ಹತ್ತಿರ ಬರಬಹುದು ಅಂದುಕೊಂಡಿದ್ದೆ ಆದರೆ ಇಷ್ಟು ಬೇಗ ಮೊದಲೇ ನನ್ನ ಮೇಲಾಗುತ್ತೆ ಎಂದು ಭಾವಿಸಿರಲಿಲ್ಲ. ನಮ್ಮ ಪಕ್ಷದ ಅಧ್ಯಕ್ಷರು ಹೇಳುವ ಪ್ರಕಾರ ಇನ್ನೂ ಎಂಟು ಜನ ನಾಯಕರು ಇವರ ಲಿಸ್ಟ್‌ನಲ್ಲಿದ್ದಾರೆ ಎಂದ ಸಚಿವ ಸತೀಶ್ ಜಾರಕಿಹೊಳಿ, ತನಿಖೆಯ ವೇಳೆ ಅಧಿಕಾರಿಗಳು ನನಗೆ ಯಾವುದೇ ಮಾನಸಿಕ ಹಿಂಸೆ ನೀಡಿಲ್ಲ. ಮಧ್ಯಾಹ್ನ ವಿಶ್ರಾಂತಿ ಪಡೆದ ಬಳಿಕ ಅವರು ಕೇಳಿದ ಪ್ರಶ್ನೆಗಳಿಗೆ ನಿರಾಳವಾಗಿ ಉತ್ತರಿಸಿದ್ದೇನೆ. ಸದ್ಯಕ್ಕೆ ಇದು ಪ್ರಾಥಮಿಕ ಹಂತದ ತನಿಖೆಯಾಗಿದ್ದು, ಇಡಿ ಮುಂದೆ ಯಾವ ಹಾದಿ ಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.ಇದೇ ವೇಳೆ, ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಲಿದ್ದೇನೆ ಮತ್ತು ನಂತರ ಬೆಳಗಾವಿಗೆ ತೆರಳಲಿದ್ದೇನೆ ಎಂದರು..

Total Views 62
RELATED ARTICLES

Most Popular

Recent Comments

KNN City News
Home
E-Paper