Thursday, November 19, 2026
HomeBelagaviಸಿಎಂ ರೈತರ ಸಭೆಗೆ ಮುನ್ನ ಎರಡು ಬಣದ ರೈತರ ನಡುವೆ ಮಾರಾಮಾರಿ: ಕೆಲ ಕಾಲ ಗೊಂದಲದ...

ಸಿಎಂ ರೈತರ ಸಭೆಗೆ ಮುನ್ನ ಎರಡು ಬಣದ ರೈತರ ನಡುವೆ ಮಾರಾಮಾರಿ: ಕೆಲ ಕಾಲ ಗೊಂದಲದ ವಾತಾವರಣ

ಬೆಳಗಾವಿ
ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಸಭೆಗೂ ಮುನ್ನವೇ ರೈತ ಬಣಗಳ ನಡುವೆ ಗದ್ದಲ ಉಂಟಾಗಿ ಕೋಲಾಹಲ ಸೃಷ್ಟಿಯಾದ ಘಟನೆ ಸೋಮವಾರ ನಡೆದಿದೆ.
ರೈತರ ಸಭೆ ಆರಂಭವಾಗುವ ಮೊದಲೇ ಎರಡು ಬಣದ ರೈತರ ನಡೆವೆ ನಡೆದ ಗಲಾಟೆಯಿಂದ ಕೆಲ ಕಾಲ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಎರಡು ಬಣದ ಇಬ್ಬರು ರೈತರನ್ನು ಪೊಲೀಸರು ಸಭೆಯಿಂದ ಹೊರಹಾಕಿದರು. ಈ ವೇಳೆ ರೈತರನ್ನು ಬಲವಂತವಾಗಿ ಹೊರಗೆ ಎಳೆದುಕೊಂಡು ಹೋದ ಪೊಲೀಸರು, ಸುವರ್ಣ ವಿಧಾನಸೌಧದ ಒಳಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು.
ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಮಹತ್ವದ ಸಭೆ ನಡೆಯುವ ಮುನ್ನವೇ ಈ ಘಟನೆ ನಡೆದಿದ್ದು, ವಿಧಾನಸೌಧದ ಆವರಣದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್, ಡಿಸಿಪಿ ನಾರಾಯಣ ಬರಮನಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

Total Views 135
RELATED ARTICLES

Most Popular

Recent Comments

KNN City News
Home
E-Paper