Thursday, November 19, 2026
HomeBelagaviಬಹುಕೋಟಿ ವಂಚನೆ ಪ್ರಕರಣ: ನೀಲಣ್ಣವರ ಆಸ್ತಿ ಮುಟ್ಟುಗೋಲು

ಬಹುಕೋಟಿ ವಂಚನೆ ಪ್ರಕರಣ: ನೀಲಣ್ಣವರ ಆಸ್ತಿ ಮುಟ್ಟುಗೋಲು

ಬೆಂಗಳೂರು
ಹೂಡಿಕೆದಾರರಿಗೆ ಮಾಸಿಕ ಶೇ.3ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ 2,459 ಕೋಟಿ ರೂ. ವಂಚಿಸಿದ ಆರೋಪದಡಿ, ಶಿವಂ ಅಸೋಸಿಯೇಟ್ಸ್ ನ ಶಿವಾನಂದ ನೀಲಣ್ಣವರ್ ಹಾಗೂ ಅವರ ಸಂಸ್ಥೆಗಳಿಗೆ ಸೇರಿದ 427.16 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಬ್ಯಾಂಕ್‌ಗಳಲ್ಲಿನ 367.77 ಕೋಟಿ ರೂ. ಎಫ್‌ಡಿ, 47 ಖಾತೆಗಳಲ್ಲಿನ 44.37 ಕೋಟಿ ರೂ, 13.68 ಕೋಟಿ ರೂ. ಮೌಲ್ಯದ 42 ಜಮೀನುಗಳು, ಬಂಗಲೆಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ 1.31 ಕೋಟಿ ರೂ. ಮೌಲ್ಯದ ಷೇರುಗಳನ್ನು ಜಪ್ತಿ ಮಾಡಲಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ 35 ಸಾವಿರಕ್ಕೂ ಅಧಿಕ ಹೂಡಿಕೆದಾರರಿಂದ ಹಣ ಸಂಗ್ರಹಿಸಿ, ಹಳೆಯ ಹೂಡಿಕೆದಾರರಿಗೆ ಬಡ್ಡಿ ನೀಡಲು ಹೊಸ ಹೂಡಿಕೆದಾರರ ಹಣ ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ.
ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ 185.95 ಕೋಟಿ ರೂ. ನಷ್ಟ ಅನುಭವಿಸಿದ್ದು, ವಿವಿಧ ಸಂಸ್ಥೆಗಳು ಮತ್ತು ಕುಟುಂಬ ಸದಸ್ಯರ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈಗಾಗಲೇ ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿಯ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದೆ.

Total Views 148
RELATED ARTICLES

Most Popular

Recent Comments

KNN City News
Home
E-Paper