Thursday, November 19, 2026
HomeBelagaviತಿಗಣೆ ಕಾಟ ನಿವಾರಣೆಗೆ ಯಲ್ಲಮ್ಮನ ಮೊರೆ ಹೋದ ಭಕ್ತ

ತಿಗಣೆ ಕಾಟ ನಿವಾರಣೆಗೆ ಯಲ್ಲಮ್ಮನ ಮೊರೆ ಹೋದ ಭಕ್ತ

 

ಸವದತ್ತಿ
ಮನೆಯಲ್ಲಿರುವ ತಿಗಣೆಗಳ ಕಾಟದಿಂದ ಮುಕ್ತಿ ಸಿಕ್ಕರೆ ಹಣ್ಣು, ಕಾಯಿ ಮಾಡಿಸುತ್ತೇನೆ ಎಂದು ಭಕ್ತರೊಬ್ಬರು ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮನಿಗೆ ವಿಶೇಷ ಕಾಣಿಕೆ ಪತ್ರ ಸಲ್ಲಿಸಿರುವ ಘಟನೆ ಕುತೂಹಲ ಮೂಡಿಸಿದೆ. ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯದ ವೇಳೆ ಈ ಪತ್ರ ಪತ್ತೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.
ಸಾಮಾನ್ಯವಾಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿ, ಕುಟುಂಬದ ನೆಮ್ಮದಿ, ಆರೋಗ್ಯ, ಉದ್ಯೋಗ ಹಾಗೂ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ದೇವಿಯ ಹುಂಡಿಗೆ ಕಾಣಿಕೆ ಸಲ್ಲಿಸುತ್ತಾರೆ. ಆದರೆ, ಮನೆಯಲ್ಲಿನ ತಿಗಣೆಗಳ ಕಾಟದಿಂದ ಮುಕ್ತಿ ದೊರೆಯಲಿ ಎಂದು ದೇವಿಯ ಮೊರೆ ಹೋಗಿರುವ ಭಕ್ತನ ಮನವಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಭಕ್ತರೊಬ್ಬರು ಬರೆದಿದ್ದ ಈ ಪತ್ರ ಪತ್ತೆಯಾಗಿದೆ. ಮನೆಯ ತಿಗಣೆಗಳ ಸಮಸ್ಯೆಯಿಂದ ಬೇಸತ್ತ ಭಕ್ತರು, ಅದರಿಂದ ಮುಕ್ತಿ ಪಡೆಯಲು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಉಗರಗೋಳ
ಇನ್ನೂ ನಾಲ್ಕು ದಿನದಿಂದ ನಡೆಯುತ್ತಿದ್ದ ಏಣಿಕೆಯಲ್ಲಿ 2.69 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ 2.34 ಕೋಟಿ ನಗದು, 26.95 ಲಕ್ಷ ರೂ. ಮೌಲ್ಯದ ಮೌಲ್ಯದ ಚಿನ್ನಾಭರಣ, 7.32 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಸೇರಿವೆ.
ಮೇ 7ರಿಂದ ಅಕ್ಟೋಬರ್‌ 10ರ ಅವಧಿಯಲ್ಲಿ ಭಕ್ತರು ಹುಂಡಿಯಲ್ಲಿ ಹಾಕಿದ್ದ ಕಾಣಿಕೆ ಎಣಿಸಲಾಗಿದೆ. ಕಾಣಿಕೆ ಇರಿಸಿದ್ದ 139 ಚೀಲಗಳ ಪೈಕಿ 54 ಚೀಲಗಳಲ್ಲಿನ ಕಾಣಿಕೆ ಎಣಿಕೆ ಮಾಡಲಾಗಿದೆ. ಇನ್ನೂ 85 ಚೀಲಗಳ ಎಣಿಕೆ ಬಾಕಿ ಇದೆ’ ಎಂದು
ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.

Total Views 79
RELATED ARTICLES

Most Popular

Recent Comments

KNN City News
Home
E-Paper