
ಬೆಳಗಾವಿ ಜಿಲ್ಲಾಸ್ಪತ್ರೆಯ ಹೆರಿಗೆ ವಾಡ್೯ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯೋರ್ವಳು ಗಂಡು ಮಗುವಿಗೆ ಜನ್ಮ ನೀಡಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸವದತ್ತಿ ತಾಲೂಕಿನ ಹಲಕಿ ತಾಂಡಾದ ಕಲ್ಪನಾ ಲಮಾಣಿ ಮೃತಪಟ್ಟ ಬಾಣಂತಿ. ಗಂಡು ಮಗುವಿಗೆ ಜನ್ಮ ನೀಡಿದ್ದ ಕಲ್ಪನಾ ಆರೋಗ್ಯವಾಗಿದ್ದಳು. ಏಕಾಏಕಿ ಸಂಜೆ ಬಿ.ಪಿ. ಕಡಿಮೆಯಾದ ಹಿನ್ನೆಲೆಯಲ್ಲಿ ಹೆರಿಗೆ ವಾಡ್೯ನಲ್ಲಿರುವ ಐಸಿಯುಗೆ ಸ್ಥಳಾಂತರ ಮಾಡಿದರೂ ಚಿಕಿತ್ಸೆ ಫಲಿಸದೆ ಮೃತಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಮಗ್ರ ಮಾಹಿತಿ ನಾಳೆಯ ಕನ್ನಡಮ್ಮ ಪತ್ರಿಕೆ ನೋಡಿ.
