Monday, November 23, 2026
HomeHeadlinesತುಂಗಭದ್ರಾ ನೀರಾವರಿ ಸಲಹಾ ಸಮಿತಿ  ಸಭೆ: ಮಾರ್ಚ್ ಅಂತ್ಯದವರೆಗೆ ಎರಡನೇ ಬೆಳೆಗೆ ನೀರು ಹರಿಸಲು ತೀರ್ಮಾನ:...

ತುಂಗಭದ್ರಾ ನೀರಾವರಿ ಸಲಹಾ ಸಮಿತಿ  ಸಭೆ: ಮಾರ್ಚ್ ಅಂತ್ಯದವರೆಗೆ ಎರಡನೇ ಬೆಳೆಗೆ ನೀರು ಹರಿಸಲು ತೀರ್ಮಾನ: ಸಚಿವ ಶಿವರಾಜ್ ತಂಗಡಗಿ 

ಕನ್ನಡಮ್ಮ ಸುದ್ದಿ-ಕೊಪ್ಪಳ: ಕುಡಿಯುವ ನೀರು ಸೇರಿದಂತೆ ಹಿಂಗಾರು ಹಂಗಾಮಿನ  ಬೆಳೆಗಳಿಗೆ ಮಾರ್ಚ್ ಅಂತ್ಯದವರೆಗೆ ನೀರು ಒದಗಿಸಲು ತುಂಗಭದ್ರ ನೀರಾವರಿ ಸಲಹಾ ಸಮಿತಿ  ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿಕಾಸಸೌಧಲ್ಲಿ ಗುರುವಾರ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ್ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಡೆದ ತೀರ್ಮಾನ ಗಳ ಕುರಿತು ಸುದ್ದಿಗೋಷ್ಠಿಯಲ್ಲಿ   ಮಾತನಾಡಿದ ಅವರು, ಎರಡನೇ ಬೆಳೆಗೆ ಮಾರ್ಚ್ ತಿಂಗಳ ಅಂತ್ಯದವರೆಗೆ ನೀರು ಒದಗಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು,
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.1ರಿಂದ ಡಿಸೆಂಬರ್ 15 ರವರೆಗೆ 1500 ಡಿ. 16 ರಿಂದ 31ರವರೆಗೆ 2000 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಜ.1ರಿಂದ 31 ವರೆಗೆ 3800 ಕ್ಯೂಸೆಕ್ಸ್ ನಂತೆ, ಫೆ.1ರಿಂದ 28 ರವರಿಗೆ 3800 ಕ್ಯೂಸೆಕ್ಸ್ ಹಾಗೂ ಮಾರ್ಚ್ 1ರಿಂದ 31ರವರೆಗೆ 3800 ಕ್ಯೂ ಸೆಕ್ಸ್ ನಂತೆ ಮತ್ತು ಕುಡಿಯುವ ನೀರಿಗಾಗಿ ಏ. ಒಂದರಿಂದ ಹತ್ತರವರೆಗೆ 1650 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಎಡದಂಡೆ ವಿಜಯನಗರ ಕಾಲುವೆಗೆ ಏಪ್ರಿಲ್ 11 ರಿಂದ ಮೇ 10ರವರೆಗೆ 150 ಕ್ಯು ಸೆಕ್ಸ್ ನಂತೆ ವಿತರಣಾ ಕಾಲುವೆ ಒಂದರಿಂದ 11 ಎ ವರೆಗೆ ಅಥವಾ ಈ ಕಾಲುವೆಗೆ ನೀರಿನ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
*ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ:* ಈ ಕಾಲುವೆಗೆ ಡಿ.1ರಿಂದ 10ರವರೆಗೆ ನೀರು ನಿಲುಗಡೆ, 11ರಿಂದ 31ರವರೆಗೆ 800 ಕ್ಯೂ ಸೆಕ್ಸ್ ನಂತೆ, ಜ.1ರಿಂದ ಹತ್ತರವರೆಗೆ ನೀರು ನಿಲುಗಡೆ ಮತ್ತು 11 ರಿಂದ 31 ರವರೆಗೆ 800 ಕ್ಯೂಸೆಕ್ಸ್ ನಂತೆ  ನೀರನ್ನು ಹರಿಸಲಾಗುತ್ತದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ 15ರವರೆಗೆ 400 ಕ್ಯೂ ಸೆಕ್ಸ್ ನಂತೆ, 16 ರಿಂದ 31ರವರೆಗೆ 600 ಕ್ಯೂ ಸೆಕ್ಸ್ ನಂತೆ, ಜ.1 ರಿಂದ ಫೆ. 28ರವರೆಗೆ 650 ಕ್ಯೂಸೆಕ್ಸ್ ನಂತೆ ಹಾಗೂ ಮಾರ್ಚ್ ಒಂದರಿಂದ 31 ರವರೆಗೆ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡಲಾಗುವುದು. ಉಳಿದಂತೆ ರಾಯಬಸವಣ್ಣ ಕಾಲುವೆಗೆ ಡಿಸೆಂಬರ್ 10 ರಿಂದ ಜನವರಿ 10ರವರೆಗೆ ನೀರು ನಿಲುಗಡೆ ಮತ್ತು ಜನವರಿ 11 ರಿಂದ ಮೇ 31ರವರೆಗೆ 250 25ನಂತೆ ನೀರು ಹರಿಸಲಾಗುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ ನೀರು ಹರಿಸಲಾಗುತ್ತದೆ. ಇದರಲ್ಲಿ ಕಾಲುವೆನಿನ ಲಭ್ಯತೆಯು ಇರುವ ತನಕ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ಸಚಿವರು ವಿವರಿಸಿದರು.19ನೇ ಟ್ರಸ್ಟ್ ಗೇಟ್ ಮುರಿದು ಹೋಗಿ ಬಳಿಕ ಎರಡನೇ ಬಾರಿ  ಅಣೆಕಟ್ಟು ಭರ್ತಿಯಾಗಿರುವುದು ಇತಿಹಾಸ. ಈ ಹಿಂದೆ ಸಿದ್ದರಾಮಯ್ಯನವರು ಅಣೆಕಟ್ಟೆಗೆ ಭೇಟಿ ನೀಡಿದ ವೇಳೆ ಡ್ಯಾಮ್ ಮತ್ತೆ ತುಂಬಲಿದ್ದು ರೈತರಿಗೆ ಎರಡನೇ ಬೆಳೆಗೆ  ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಮಳೆರಾಯನ ಕೃಪೆಯಿಂದ ಇಂದು ಎರಡನೇ ಬೆಳೆಗೆ ನೀರು ಒದಗಿಸಲಾಗುತ್ತಿದೆ ಎಂದರು.
*ಸಭೆಯಲ್ಲಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ರೈತರು*
ಅಣೆಕಟ್ಟೆಯ ಕ್ರಸ್ಟ್ ಗೇಟ್ ಮುರಿದುಹೋದ ಸಂದರ್ಭದಲ್ಲಿ ಸರ್ಕಾರ ತ್ವರಿತಗತಿಯಲ್ಲಿ ಮರುಗೇಟ್ ಅಳವಡಿಕೆಗೆ ಸ್ಪಂದಿಸಿದ ರೀತಿಗೆ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಇದೆ ವೇಳೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಬೋಸರಾಜ್, ಕಾ.ಡಾ.ಅಧ್ಯಕ್ಷ ಹಸನಸಾಬ್‌ ದೋಟಿಹಾಳ್‌,
ಶಾಸಕರಾದ ಹಂಪನಗೌಡ ಬಾದರ್ಲಿ, ಶಿವರಾಜ್ ಎಸ್.ಪಾಟೀಲ್, ಬಸನಗೌಡ ದದ್ದಲ್, ಬಿ.ಎನ್.ನಾಗರಾಜ್, ಎಚ್.ಆರ್.ಗವಿಯಪ್ಪ, ಬಸನಗೌಡ ತೂರ್ವಿಹಾಳ್, ಪರಿಷತ್ ಸದಸ್ಯರಾದ ವಸಂತ್ ಕುಮಾರ್, ಶರಣೇಗೌಡ ಬಯ್ಯಾಪುರ  ಇನ್ನಿತರರು ಇದ್ದರು
Total Views 75
RELATED ARTICLES

Most Popular

Recent Comments

KNN City News
Home
E-Paper