Monday, November 23, 2026
HomeBelagaviಮೀನು ಸಾಕಣಿಕೆ ಟೆಂಡರ್ ನಲ್ಲಿ ದಲಿತರಿಗೆ ಅವಕಾಶ ನೀಡಲು ಆಗ್ರಹ

ಮೀನು ಸಾಕಣಿಕೆ ಟೆಂಡರ್ ನಲ್ಲಿ ದಲಿತರಿಗೆ ಅವಕಾಶ ನೀಡಲು ಆಗ್ರಹ

ಕನ್ನಡಮ್ಮ ಸುದ್ದಿ

 

ಖಾನಾಪುರ: ಹಿಂದಿನ 10-15 ವರ್ಷದಿಂದ ಜುಲೈ-ಅಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲ ನಮ್ಮಲಿನ ಸಾಮೋಹಿಕವಾಗಿ ಊರಿನ ಜನರೊಲ್ಲರು ಸೇರಿ ವಾರ ಬಿಡುವ ಸಂದರ್ಬದಲ್ಲಿ ಕೆರೆಯನ್ನ ಗ್ರಾಮ ದೇವಿ ದೇವಸ್ಥಾನದಲ್ಲಿ ಹರಾಜುಗೋಳಿಸುತ್ತಿದ್ದರು ಅದರಲ್ಲೂ ನಮ್ಮ ಎಸ್.ಪಿ ಸಮುದಾಯದ ಜನರಿಗೆ ಅವಕಾಶವಿರುತ್ತಿರಲಿಲ್ಲ ಮತ್ತು ಅದರಲ್ಲಿ ಬಂದ ಸುಮಾರು 20,000 ರಿಂದ 40,000ಗಳ ಲೆಕ್ಕವನ್ನು ಗ್ರಾ.ಪಂ ದವರಾಗಲಿ ಅಥವಾ ಊರಿನ ಹಿರಿಯರಾಗಲಿ ಇದುವರೆಗೆ ಬಹಿರಂಗಪಡಿಸಿರುವುದಿಲ್ಲ ಸದರಿ ಹರಾಜನ್ನು ಸರ್ಕಾರದ ನಿಯಮಾನುಸಾರವೇ ಮಾಡಿದ್ದಾದಲ್ಲಿ ಅದರ ಪುರಾವೆಗಳು ಸಹ ಇರುವುದಿಲ್ಲ ಇದರಲ್ಲಿ ನಿಖರವಾಗಿ ತಿಳಿದು ಬರುವ ಸತ್ಯವೆನೆಂದರೆ ಬ್ರಷ್ಟಾಚಾರ ನಡೆದಿರುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಸಂಘಟನೆ ಖಾನಾಪುರ್  ತಾಲೂಕಾ ಸಂಚಾಲಕ ಉದಯ ಕೋಲ್ಕಾರ ಆರೋಪಿಸಿದ್ದಾರೆ.

 

ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದಯ ಕೋಲ್ಕಾರ್ ಸುಮಾರು ವರ್ಷಗಳಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ಅದಕ್ಕಾಗಿ ನಮಗೆ ನ್ಯಾಯವದಗಿಸಿಕೊಡಬೇಕು ನಮ್ಮ ಊರಿನ ಎಲ್ಲ ಸಾಮೂಹಿಕ ಕಾರ್ಯಕ್ರಮಗಳಲ್ಲಿ ನಮ್ಮ ಎಸ್.ಸಿ ಸಮುದಾಯದ ಜನರಿಗೂ ಆದ್ಯತೆ ದೊರೆಯಬೇಕು ಮತ್ತು ನಮ್ಮನ್ನು ಸಮುದಾಯದವರನ್ನು ಸಮಾನಗಿ ಕಾಣಬೇಕು, ಸದರಿ ಕೆರೆಯಲ್ಲಿ ನಮ್ಮ ಸಮುದಾಯದವರಿಗೆ ಮಿನು ಸಾಕಾಣಿಕೆಗಾಗಿ ಇದುವರೆಗೂ ಪರವಾಣಿಗೆ ನಿಡದಿರುವ ಕಾರಣ ನನ್ನ ಜಾತಿಯ ಬಗ್ಗೆ ತಾರತಮ್ಮ ಮಾಡಿ ಕೇವಲ ಮೇಲ್ಜಾತಿಯವರಿಗೆ ಮಾತ್ರ ಅವಕಾಶವಿತ್ತು ನಮ್ಮ ಸಮುದಾಯದವರಿಗೆ ಇದೂ ವರೆಗೂ ಅವಕಾಶ ದೊರತ ಉದಾಹರಣೆಗಳಿರುವುದಿಲ್ಲ. ಆದ್ದರಿಂದ ಸರ್ಕಾರದ ನೀಯಮದ ಪ್ರಕಾರ ನಾನು ಅರ್ಜಿಸಲ್ಲಿಸಿದರೂ ಕೂಡಾ ಸದರಿ ಗ್ರಾ.ಪಂ ದವರು ಸಹ ಜಾತಿ ತಾರತಮ್ಯ ಮಾಡುತ್ತಿದ್ದಾರೆ ಈ ಅನ್ಯವನ್ನ ಸರಿಪಡಿಸದೇ ಇದ್ದಲ್ಲಿ ಮುಂದಿನ ದಿನದಲ್ಲಿ ಹೋರಾಟ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ.

 

Total Views 63
RELATED ARTICLES

Most Popular

Recent Comments

KNN City News
Home
E-Paper