Monday, November 23, 2026
HomeKoppalಕೊಪ್ಪಳ ನಗರಸಭೆ ಉಪಚುನಾವಣೆ ; 8 ನೇ ವಾರ್ಡ್  ಬಿಜೆಪಿ ಅಭ್ಯರ್ಥಿ ಕವಿತಾ ಗಾಳಿ, 11...

ಕೊಪ್ಪಳ ನಗರಸಭೆ ಉಪಚುನಾವಣೆ ; 8 ನೇ ವಾರ್ಡ್  ಬಿಜೆಪಿ ಅಭ್ಯರ್ಥಿ ಕವಿತಾ ಗಾಳಿ, 11 ನೇ ವಾರ್ಡ್  ಕಾಂಗ್ರೆಸ್‌ ನ ರಾಜಶೇಖರ ಆಡೂರ ಗೆಲ್ಲುವು

ಕನ್ನಡಮ್ಮ ಸುದ್ದಿ-ಕೊಪ್ಪಳ: ವಿವಿಧ ಕಾರಣಗಳಿಂದ ತೆರವು ಆಗಿದ್ದ ಕೊಪ್ಪಳ ನಗರಸಭೆಯ  8 ಮತ್ತು 11 ನೇ ವಾರ್ಡಿನ  ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು  8ನೇ ವಾರ್ಡನಲ್ಲಿ ಬಿಜೆಪಿ ಅಭ್ಯರ್ಥಿ ಕವಿತಾ ಗಾಳಿ ಮತ್ತು 11 ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಆಡೂರು ಗೆಲುವು ಪಡೆದಿದ್ದಾರೆ.
ಮಹಿಳೆಗೆ ಮೀಸಲಾಗಿದ್ದ 8ನೇ ವಾರ್ಡ್‌ಗೆ ಈ ಹಿಂದೆ ಸದಸ್ಯೆಯಾಗಿದ್ದ ಸುನಿತಾ ಗಾಳಿ ಸರ್ಕಾರಿ ನೌಕರಿಗೆ ನೇಮಕವಾಗಿದ್ದರಿಂದ ಈ ಸ್ಥಾನ ತೆರವಾಗಿತ್ತು. ಉಪ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಒಟ್ಟು 928 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಕವಿತಾ ಬಸವರಾಜ ಗಾಳಿ 486 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರೇಣುಕಾ ಕಲ್ಲಾಕ್ಷಪ್ಪ ಪೂಜಾರ 436 ಮತಗಳನ್ನು ಪಡೆದುಕೊಂಡರು. ಆರು ಮತಗಳು ನೋಟಾಕ್ಕೆ ಬಂದಿವೆ.
11ನೇ ವಾರ್ಡ್ ಬಿಜೆಪಿ ಸದಸ್ಯರಾಗಿದ್ದ ರಾಜಶೇಖರ ಆಡೂರ ಲೋಕಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ ಸೇರ್ಪಡೆಯಾಗಿ ರಾಜಿನಾಮೆ ನೀಡಿದ್ದರಿಂದ ಖಾಲಿ ಇದ್ದ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಮತ್ತೆ ಆಡೂರ ಅವರು ಗೆಲುವು ಸಾಧಿಸಿದ್ದಾರೆ. ಚಲಾವಣೆಯಾದ ಒಟ್ಟು 707 ಮತಗಳಲ್ಲಿ ಕಾಂಗ್ರೆಸ್ ನ ರಾಜಶೇಖರ ಆಡೂರ 517 ಮತಗಳನ್ನು ಪಡೆದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಚನ್ನಬಸಪ್ಪ ಗವಿಸಿದ್ದಪ್ಪ ಗಾಳಿ 165 ಮತಗಳನ್ನು ಗಳಿಸಿದರು. ನೋಟಾಕ್ಕೆ 25 ಮತಗಳು ಬಂದಿವೆ ಎಂದು ಚುನಾವಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ತಿಳಿಸಿದ್ದಾರೆ.
Rajashekar Aduru
Kavita Gali
ಈ ಮೂಲಕ ಎರಡು ವಾರ್ಡುಗಳಲ್ಲಿ ಒಂದು ಕಾಂಗ್ರೆಸ್ ಮತ್ತು ಒಂದು ಬಿಜೆಪಿ ತೆಕ್ಕೆಗೆ ಬಂದಂತಾಗಿದೆ.8ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಕವಿತಾ ಬಸವರಾಜ ಗಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ಪೂಜಾರ ಸ್ಪರ್ಧಿಸಿದ್ದರು. 8ನೇ ವಾರ್ಡಿನಲ್ಲಿ 1407 ಮತದಾರರಿದ್ದು, 928  ಜನರು ಮತದಾನ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ಸಿನ ರೇಣುಕಾ ಪೂಜಾರ 436 ಮತ ಪಡೆದಿದ್ದು, ಬಿಜೆಪಿಯ ಕವಿತಾ ಗಾಳಿ 486 ಮತ ಬಂದಿವೆ. 6 ನೋಟಾ ಮತಕ್ಕೆ ಬಿದ್ದಿದ್ದು, ಈ ಮೂಲಕ ಬಿಜೆಪಿಯ ಕವಿತಾ ಗಾಳಿ 50 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ 11ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಆಡೂರು ರಾಜಶೇಖರ ಸ್ಪರ್ಧಿಸಿದ್ದರು. ವಾರ್ಡಿನಲ್ಲಿ 1087 ಮತದಾರರಿದ್ದು, 707 ಜನರು ಮತದಾನ ಮಾಡಿದ್ದಾರೆ. ಬಿಜೆಪಿಯ ಚನ್ನಬಸಪ್ಪ ಗಾಳಿ ಕೇವಲ 165 ಮತ ಪಡೆದಿದ್ದು, ಕಾಂಗ್ರೆಸ್ಸಿನ ರಾಜಶೇಖರ ಆಡೂರು 517  ಮತಗಳಿಸಿದ್ದಾರೆ. 25  ಮತಗಳು ನೋಟಾಕ್ಕೆ ಬಿದ್ದಿವೆ‌. ಈ ಮೂಲಕ 352  ಮತಗಳ ಅಂತರದಿಂದ ಕಾಂಗ್ರೆಸ್ಸಿನ ರಾಜಶೇಖರ ಆಡೂರು ಗೆಲುವು ಸಾಧಿಸಿರುವರು.
Total Views 99
RELATED ARTICLES

Most Popular

Recent Comments

KNN City News
Home
E-Paper