
ಬೆಳಗಾವಿ
ಕರ್ನಾಟಕ ರಾಜ್ಯವನ್ನು ರಾಮರಾಜ್ಯ ಮಾಡಲು ಸಾಕಷ್ಟು ಜನ ಹೋರಾಟ ಮಾಡಿದ್ದಾರೆ. ನಿಮ್ಮ ಅಲ್ಲಾ ಎಲ್ಲಿ ಬಂದನೋ ಜಮೀರ್ಯಾ ನಮ್ಗ ಸೈತಾನ್ ಅಂತಿ ಮಗನ. ನಮ್ಮ ಭೂಮಿ ಕೇಳ್ತಿ ಎಂದು ಬಸನಗೌಡ ಪಾಟೀಲ್ ಯತ್ನಾಳ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಭಾನುವಾರ ಗಾಂಧಿ ಭವನದಲ್ಲಿ ವಕ್ಫ್ ಭೂ ಕಬಳಿಕೆ ವಿರೋಧಿಸಿ ಜನಜಾಗೃತಿ ಹೋರಾಟದ ಸಮಾವೇಶದಲ್ಲಿ ಮಾತನಾಡಿದರು. ಬಸವಣ್ಣನವರ ಅನುಭವ ಮಂಟಪದ ಪೀರ್ ಭಾಷಾ ದರ್ಗಾ ಎಂದು ಮಾಡಿದ್ದಾರೆ. ಮಕ್ಕಳ್ಯಾ ಅವರಿಗೆ ಬೆಂಬಲ ಕೊಡ್ತಿರಾ ? ಹಿಂದೂ ದೇವಸ್ಥಾನ ಕಬಳ್ಸಿತ್ತೀರಾ ? ಈಗ ಹಿಂದು ರೈತರ ಜಮೀನು ಕಬಳಸ್ತಿರಾ ಎಂದು ಹರಿಹಾಯ್ದರು.
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿ,ಕಳೆದ ನ.25 ರಿಂದ ವಕ್ಫ್ ವಿರುದ್ಧ ನಡೆಸಿದ ಮೊದಲನೇ ಹಂತದ ಹೋರಾಟ ಬೀದರ್, ರಾಯಚೂರ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಜನಜಾಗೃತಿ ಮಾಡಿಸಿಕೊಂಡು ಬಂದಿದ್ದೇವೆ. ವಕ್ಫ್ ಮುಸ್ಲಿಮ್ ಸಮಾಜದ ಪರವಾಗಿದೆ ಎಂದು ಭಾವಿಸಿದ್ದೇವು. ಆದರೆ ಹಿಂದುಗಳ ಮಠ, ಮಂದಿರ ರೈತರಿಗೆ ಮಾರಕವಾಗಿದೆ. ವಕ್ಫ್ ನಿಂದ ಅಧ್ಯಾಯನ ನಡೆಸಬೇಕೆಂದು ವಕ್ಫ್ ನಿಷೇಧ ಮಾಡುವುದು ಮುಂದೆ ಹಾಕಿದೆ ಎಂದರು.
ದೇಶದಲ್ಲಿ ವಕ್ಫ್ ಹೆಸರಿನಲ್ಲಿ ಮಾಫಿಯಾ ಮಾಡಿಕೊಂಡಿದ್ದಾರೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಕ್ಫ್ ಅನಾಹುತವಾಗಿದೆ. ವಕ್ಫ್ ಕರಾಳ ಕಾನೂನು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ನಮ್ಮ ತಂಡ ನಡೆಸಿದ ಅಧ್ಯಯನ ಕುರಿತು ದೆಹಲಿಯ ವಕ್ಫ್ ಸಮಿತಿಗೆ ವರದಿ ಸಲ್ಲಿಸಿ ಎರಡನೇ ಹಂತದ ಹೋರಾಟದ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದರು.
ಎರಡನೇ ಹಂತದಲ್ಲಿ ಹೋರಾಟ ದಾವಣಗೆರೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ವಕ್ಫ್ ವಿರುದ್ಧ ಸಮಾವೇಶ ಮಾಡುತ್ತೇವೆ. ಸುಮಾರು 10 ಲಕ್ಷ ಜನರನ್ನು ಸೇರಿಸಿ ಕೋಟ್ಯಂತರ ರೂ. ವೆಚ್ಚ ಬರುತ್ತದೆ. ಅದನ್ನು ನಾನೇ ಸೇರಿಸಬಹುದು. ಆದರೆ ಅಪ್ಪ ಮಗ ಆಗುತ್ತೇನೆ. ಎಲ್ಲರೂ ಆರ್ಥಿಕ ಸಹಾಯ ಮಾಡಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ವಕ್ಫ್ ಎನ್ನುವುದು ದೇಶಕ್ಕೆ ಕ್ಯಾನ್ಸರ್ ಇದ್ದ ಹಾಗೆ. ವಕ್ಫ್ ಹೋರಾಟದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ ಭಾಗವಹಿಸಿ ಅನೇಕ ಮುಖಂಡರು ಕೈ ಜೋಡಿಸಿದರು. ಈ ಹೋರಾಟ ಚುನಾವಣೆ ನಡೆಸಲು ಅಲ್ಲ. ಜನರ ಆಸ್ತಿ ರಕ್ಷಣೆ ಮಾಡಲು ಎಂದರು. ಬೆಳಗಾವಿಯ ಆನಂದ ವಾಡಿಯ 220 ಮನೆಗಳು, ಮುಚ್ಚಂಡಿಯ 137 ಮನೆಗಳು ವಕ್ಫ್ ಬೋಡ್೯ ಎಂದು ಮಾಡಿದ್ದಾರೆ. ಇದೊಂದು ದೊಡ್ಡ ದುರಂತ ಎಂದರು.
ವಕ್ಫ್ ವಿರುದ್ಧ ಜನಾಂದೋಲನ ಮಾಡದಿದ್ದರೇ ಮುಂದೊಂದು ದಿನ ನಮ್ಮ ಮನೆಗೂ ಒಕ್ಕರಿಸುತ್ತದೆ ಮಾರಿ. ಕರ್ನಾಟಕದ ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ವಕ್ಫ್ ಕಾಯ್ದೆ ನಿಷೇಧ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪ ಮಾಡಿದರೆ ಅದಕ್ಕೆ ಸಹಮತ ಕೊಡಬೇಕು ಎಂದರು.
ವಕ್ಫ್ ವಿರುದ್ಧ ಹೋರಾಟ ಮಾಡಬೇಕಿದ್ದ ನಮ್ಮ ಬಿಜೆಪಿಯ ನಾಯಕರೇ ಅಪಸ್ವರ ಎತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುವುದು ಬಿಡಿ ಎಂದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ರೈತರ ಪರವಾಗಿ ನಿಂತು ಹೋರಾಟ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ ನಡೆಸುತ್ತಿದ್ದಾರೆ. ಅವರನ್ನು ಉಚ್ಚಾಟನೆ ಮಾಡಿದರೆ ಜನರು ಹೋರಾಟ ಮಾಡಬೇಕೆಂದರು.
ರಾಜ್ಯ ಸರಕಾರ ನಿಷೇಧಿತ ಸಂಘಟೆಗಳ ಮೇಲಿನ ಪ್ರಕರಣ ಹಿಂಪಡೆದರು. ಕಾಂಗ್ರೆಸ್ ಸರಕಾರ ಬಂದಾಗ ಹಿಂದೂ ಕಾರ್ಯಕರ್ತನ ಹತ್ಯೆಯಾದವು. ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಯಾದವು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾಪನೆಯಾಗಿ ಒಂದೂವರೆ ವರ್ಷವಾಗಿದೆ. ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಮುಸ್ಲಿಮ್ ರ ಮೇಲಿನ ಹಲ್ಲೆ ಪ್ರಕರಣ ಹಿಂಪಡೆದರು. ಈಗ ಬಡ ಜನರ ಹಾಗೂ ರೈತರ ಹಿಂದುಗಳ ಭೂಮಿಯನ್ನು ಕಬಳಿಸುವ ಹುನ್ನಾರ ರಾಜ್ಯ ಸರಕಾರ ನಡೆಸಿದೆ ಎಂದರು.
ಆಂದ್ರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಕ್ಫ್ ಕಾಯ್ದೆಯನ್ನು ನಿಷೇಧ ಮಾಡಿದ್ದಾರೆ. ಮುಸ್ಲಿಮ್ ರಿಗೆ ಯಾರೂ ಭೂಮಿ ಬಿಟ್ಟು ಹೋಗಿಲ್ಲ. ಹಿಂದುಗಳು ಕೊಟ್ಟ ಭೀಕ್ಷೆ. ಹಿಂದುಗಳು ಸನಾತನ ಧರ್ಮ ಕೊಟ್ಟ ಭೂಮಿ ಎಂದು ಸಚಿವ ಜಮೀರ್ ಅಹ್ಮದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಮಾಜಿ ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ಚುನಾವಣೆ ವಿಷಯದಲ್ಲಿ ವಕ್ಫ್ ವಿಷಯದಲ್ಲಿ ರಾಜ್ಯ ಸರಕಾರ ಅನ್ಯಾಯ ಮಾಡಿದೆ ಎಲ್ಲರೂ ಹೋರಾಟ ಮಾಡೋಣ ಎಂದರು.
