Monday, November 23, 2026
HomeKoppalದತ್ತು ಗ್ರಾಮ ಯೋಜನೆ ಯಶಸ್ವಿಯಾದರೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 5 ಗ್ರಾಮಗಳ ದತ್ತಕ್ಕೆ : ರಾಜಶೇಖರ...

ದತ್ತು ಗ್ರಾಮ ಯೋಜನೆ ಯಶಸ್ವಿಯಾದರೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 5 ಗ್ರಾಮಗಳ ದತ್ತಕ್ಕೆ : ರಾಜಶೇಖರ ಹಿಟ್ನಾಳ

ಮೋರನಹಳ್ಳಿ ದತ್ತು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಸದರಿಂದ ಭೂಮಿ ಪೂಜೆ

ಕನ್ನಡಮ್ಮ ಸುದ್ದಿ-ಕೊಪ್ಪಳ (ಅಳವಂಡಿ): ನರೇಗಾ ಯೋಜನೆಯ ಮೂಲಕ ಗ್ರಾಮೀಣರ ಆರ್ಥಿಕ ಅಭಿವೃದ್ಧಿ ಜತೆಗೆ ಸಮುದಾಯದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಲೋಕಸಭಾ ವ್ಯಾಪ್ತಿಯ ಎರಡು ಗ್ರಾಮಗಳ ಸಮಗ್ರ ಅಭಿವೃದ್ಧಿಗೊಳಿಸಿ ಗ್ರಾಮಗಳನ್ನು ಮಾದರಿಯಾಗಿಸುವ ಉದ್ದೇಶದಿಮದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನರೇಗಾ ಮೋರನಹಳ್ಳಿ ಗ್ರಾಮದ ದತ್ತು ಗ್ರಾಮ ಘೋಷಣೆ ಕಾರ್ಯಕ್ರಮದ ಅಂಗವಾಗಿ ನಡೆದ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವುರು, ದತ್ತು ಗ್ರಾಮ ಯೋಜನೆ ಯಶಸ್ವಿಯಾದರೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 5 ಗ್ರಾಮಗಳನ್ನು ದತ್ತು ಪಡೆದು ಪತ್ರಿ ವರ್ಷ ಅಭಿವೃದ್ಧಿ ಪಡಿಸುವ ಯೋಚನೆಯಿದೆ. ಗ್ರಾಮಸ್ಥರು ಯೋಜನೆಗೆ ಸಹಕರಿಸಬೇಕು’ ಎಂದು ಹೇಳಿದರು.

ಜಿ.ಪಂ ಯೋಜನಾ ನಿರ್ದೆಶಕ ಪ್ರಕಾಶ ವಡ್ಡರ ಮಾತನಾಡಿ, ‘ಭಾರತ ದೇಶ ಹಳ್ಳಿಗಳ ದೇಶ. ಅವುಗಳ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ಬಹುಮುಖ್ಯ ಪಾತ್ರ ವಹಿಸಿದೆ. ದಿಶಾ ಸಮಿತಿ ಸಭೆಯ ಆಶಯದಂತೆ ಎರಡು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಮೋರನಹಳ್ಳಿ ದತ್ತು ಗ್ರಾಮವಾಗಿ ಸ್ವೀಕರಿಸಿ ಸಮಗ್ರ ಅಭಿವೃದ್ಧಿ ಒಟ್ಟು ₹5.13 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು, ಗಣ್ಯರಾದ ಮಲ್ಲೇಶಪ್ಪ ಹೊರಪೇಟಿ  ಮಾತನಾಡಿದರು. ಇದಕ್ಕೂ ಮೊದಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ಕಳಸ, ವಾದ್ಯಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ನಂತರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ವಿಠ್ಠಲ ಚೌಗಲೆ, ತಾ.ಪಂ ಇಒ ದುಂಡೇಶ ತುರಾದಿ, ಬಿಇಒ ಶಂಕರಯ್ಯ, ದಿಶಾ ಸಮಿತಿಯ ದೊಡ್ಡಬಸನಗೌಡ, ಬಯ್ಯಾಪುರ, ಸರಸ್ವತಿ ಇಟ್ಟಂಗಿ, ಗ್ರಾ.ಪಂ ಅಧ್ಯಕ್ಷ ದುರಗಪ್ಪ ಭಜಂತ್ರಿ, ವೆಂಕನಗೌಡ ಹಿರೇಗೌಡ್ರು, ಭರಮಪ್ಪ ನಗರ, ಗಾಳೆಪ್ಪ ಪೂಜಾರ, ಅಂದಪ್ಪ, ದೇವಪ್ಪ, ಭರಮಪ್ಪ, ರೋಹಿಣಿ, ಶರಣಪ್ಪ, ಯಂಕಣ್ಣ, ಲಲಿತಾ ವಿವಿಧ ಇಲಾಖೆ ಅಧಿಕಾರಿಗಳು ಇತರರು ಪಾಲ್ಗೊಂಡಿದ್ದರು.

Total Views 40
RELATED ARTICLES

Most Popular

Recent Comments

KNN City News
Home
E-Paper