Monday, November 23, 2026
HomeKoppalಸ್ವಚ್ಛ, ಹಸಿರು ಗ್ರಾಮಗಳ ಉಸಿರಾಗಲಿ: ಪರಮಪೂಜ್ಯ ಶ್ರೀ.ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

ಸ್ವಚ್ಛ, ಹಸಿರು ಗ್ರಾಮಗಳ ಉಸಿರಾಗಲಿ: ಪರಮಪೂಜ್ಯ ಶ್ರೀ.ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕಾಮನೂರು ದತ್ತು ಗ್ರಾಮದಲ್ಲಿ ಕಾಮಗಾರಿಗಳಿಗೆ ಅಡಿಗಲ್ಲು

ಕನ್ನಡಮ್ಮ ಸುದ್ದಿ-ಕೊಪ್ಪಳ:- ದೇಶ ಉನ್ನತ ದೇಶವಾಗಬೇಕಾದರೆ ಸ್ವಚ್ಛ, ಹಸಿರು ಗ್ರಾಮಗಳ ಉಸಿರಾಗಬೇಕೆಂದು ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೇಬಗೆರಿ ಗ್ರಾಮ ಪಂಚಾಯತಿಯ ಕಾಮನೂರು ಗ್ರಾಮದಲ್ಲಿ ಜರುಗಿದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ದತ್ತು ಗ್ರಾಮದ ಅಡಿಗಲ್ಲು ಸಮಾರಂಭದ ಉದ್ಘಾಟನೆ ನೇರವೇರಿಸಿ ಆರ್ಶಿವಚನ ನೀಡಿದರು.

ಕೇವಲ ಅನುದಾನದಿಂದ ಗ್ರಾಮ ಅಭಿವೃದ್ದಿ ಆಗುವದಿಲ್ಲ. ನಮ್ಮೂರು ಎನ್ನುವ ಅಭಿಮಾನದಿಂದ ಗ್ರಾಮ ಅಭಿವೃದ್ಧಿ ಆಗುತ್ತದೆ ಎನ್ನುವ ಮನದಾಳದ ಮಾತು ಬಿಚ್ಚಿಟ್ಟರು. ಮದ್ಯ ಪಾನ ಮುಕ್ತ, ಗುಟ್ಕಾ ಮುಕ್ತ ಕಾಮನೂರು ಗ್ರಾಮ ದತ್ತು ಗ್ರಾಮ ಅಯ್ಕೆ ಮಾಡಿಕೊಂಡುರುವದಕ್ಕೆ ಹರ್ಷವ್ಯಕ್ತಪಡಿಸಿದರು. ಸಂಸದರಾದ ರಾಜಶೇಖರ ಹಿಟ್ನಾಳ ಮಾತನಾಡಿ ದತ್ತು ಗ್ರಾಮಕ್ಕೆ ಅನುದಾನವನ್ನು ಗ್ರಾಮದ ಯುವಕರು ಕಾಮಗಾರಿ ಗುಣಮಟ್ಟ ಅಗುತ್ತಿರುವ ಬಗ್ಗೆ ಮುಂದೆ ನಿಂತು ಕಾಳಜಿವಹಿಸಬೇಕೆಂದರೂ. ಪ್ರತಿ ವಿಧನಸಭಾ ಕ್ಷೇತ್ರಕ್ಕೆ 5 ಗ್ರಾಮಗಳನ್ನು ದತ್ತು ಗ್ರಾಮಗಳನ್ನ ಆಯ್ಕೆ ಮಾಡಿ ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದರು.

ಶಾಸಕ ಗಾಲಿ ಜನಾರ್ಧನರೆಡ್ಡಿ ಮಾತನಾಡಿ ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ, ಜನರಿಗೆ ಮೂಲಭೂತ ಸೌಕರ್ಯಗಳು ಸೇರಿ ಇತರ ನಾಗರಿಕ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಒದಗಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ ಎಂದರು. ಪ್ರಾಸ್ತಾವಿಕವಾಗಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಪ್ರಕಾಶ್ ವಿ ಮಾತನಾಡಿದರು. ದಿಶಾ ಸಮಿತಿ ಸದಸ್ಯರಾದ ದೊಡ್ಡಬಸವ ಬಯ್ಯಾಪುರ, ಸರಸ್ವತಿ ಇಟ್ಟಂಗಿ, ತಾ.ಪಂ. ಇಒ ದುಂಡಪ್ಪ ತುರಾದಿ, ತಹಶಿಲ್ದಾರ ವಿಠಲ್ ಚೌಗಲಾ, ಗ್ರಾ.ಪಂ ಅಧ್ಯಕ್ಷೆ ದೇವಮ್ಮ ಮಹಾದೇವಪ್ಪ ಕುರಿ, ಉಪಾಧ್ಯಕ್ಷ ಪಾರಮ್ಮ ಭೋವಿ, ಸಹಾಯಕ‌ ನಿರ್ದೇಶಕ(ಗ್ರಾಉ)ಯಂಕಪ್ಪ, ಲೇಬಗೇರಿ ಗ್ರಾಮ ಪಂಚಾಯತಿ ಪಿಡಿಓ ಸಂಗಮೇಶ್ ತೇರಿನ ಇತರರು ಪಾಲ್ಗೊಂಡಿದ್ದರು.

Total Views 21
RELATED ARTICLES

Most Popular

Recent Comments

KNN City News
Home
E-Paper