Monday, November 23, 2026
HomeKoppalವಾರ್ಡ್ ಗೆ ಸೌಲಭ್ಯ ಕಲ್ಪಿಸಲು ಆಗ್ರಹ : ಸದಸ್ಯ ಸೋಮಣ್ಣ ಹಳ್ಳಿ ತಲೆಯ ಮೇಲೆ ಕಲ್ಲುಹೊತ್ತು...

ವಾರ್ಡ್ ಗೆ ಸೌಲಭ್ಯ ಕಲ್ಪಿಸಲು ಆಗ್ರಹ : ಸದಸ್ಯ ಸೋಮಣ್ಣ ಹಳ್ಳಿ ತಲೆಯ ಮೇಲೆ ಕಲ್ಲುಹೊತ್ತು ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಕೊಪ್ಪಳ : ನಗರದ 16ನೇ ವಾರ್ಡ್ ಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು 16ನೇ ವಾರ್ಡ್ ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ಅವುರು ನಗಸರಭೆ ಕಛೇರಿ ಎದುರು ತಮ್ಮ ತಲೆಯ ಮೇಲೆ ಕಲ್ಲುಹೊತ್ತು ವಿನೂತವಾಗಿ ಪ್ರತಿಭಟಿಸಿದರು. ಶನಿವಾರ ನಗರಸಭೆ ಸಾಮಾನ್ಯ ಸಭೆ ನಡೆಯುವ ವೇಳೆ ತಲೆಯ ಮೇಲೆ ನಾಮ ಹಾಕಿದ ಕಲ್ಲು ಹೊತ್ತು ಬಂದ ಸದಸ್ಯ ಸೋಮಣ್ಣ ಹಳ್ಳಿ ಈ ಕಲ್ಲಿಗೆ ಬೆಲೆ ಇದೆ, ನನ್ನ ಮನವಿಗೆ ಬೆಲೆ ಇಲ್ಲ, ವಾರ್ಡ್ ನಲ್ಲಿ ಅಗತ್ಯ ನಾಗರಿಕ ಸೌಲಭ್ಯಕ್ಕೆ ಜಿಲ್ಲಾಧಿಕಾರಿಗಳು, ನಗರಸಭೆ ಅಧ್ಯಕ್ಷ, ಪೌರಾಯುಕ್ತರಿಗೆ ಮನವಿ ಸಲ್ಲಿಸುತ್ತ ಬಂದಿದ್ದೇನೆ, ಆದರೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ, ಪೌರಾಯುಕ್ತ ಗಣಪತಿ ಪಾಟೀಲ, ಸದಸ್ಯರು, ಪಿಐ ಜಯಪ್ರಕಾಶ ಅವುರುಗಳು ಸೋಮಣ್ಣ ಹಳ್ಳಿ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳುವ ಭರಸವೆ ನೀಡಿದ ಮೇಲೆ ಸೋಮಣ್ಣ ಹಳ್ಳಿ ಪ್ರತಿಭಟನೆಯನ್ನು ಕೈಬಿಟ್ಟರು.

Total Views 32
RELATED ARTICLES

Most Popular

Recent Comments

KNN City News
Home
E-Paper