Monday, November 23, 2026
HomeKoppalಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ಧೇಶ್ವರನ ಹೆಸರು ನಾಮಕರಣ ಬೇಡ ಗವಿಮಠದ ಪ್ರಕಟನೆ

ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ಧೇಶ್ವರನ ಹೆಸರು ನಾಮಕರಣ ಬೇಡ ಗವಿಮಠದ ಪ್ರಕಟನೆ

ಗವಿಸಿದ್ಧೇಶ ನಿಮ್ಮೆಲ್ಲರ ಮನೆಯ ದೇವರು. ಮನದ ದೇವರು

ಕನ್ನಡಮ್ಮ ಸುದ್ದಿ-ಕೊಪ್ಪಳ: ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳ, ನಿಲ್ದಾಣ, ವಿಶ್ವವಿದ್ಯಾಲಯ ಹಾಗೂ ವೃತ್ತಗಳಿಗೆ ಗವಿಸಿದ್ಧೇಶ್ವರನ ಹೆಸರು ‌ನಾಮಕರಣ ಮಾಡುವುದು ಬೇಡ ಎಂದು ಈ ಕುರಿತು ಗವಿಮಠದ ವತಿಯಿಂದ ಪ್ರಕಟಣೆ ನೀಡಲಾಗಿದ್ದು, ಅನೇಕ ಸಂಘ–ಸಂಸ್ಥೆಗಳು ಕೊಪ್ಪಳ ರೈಲು ನಿಲ್ದಾಣಕ್ಕೆ ಗವಿಸಿದ್ಧೇಶ್ವರ ರೈಲು ನಿಲ್ದಾಣ ಎಂದು ಹೆಸರನ್ನಿಡಬೇಕು ಎಂದು ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.  ಸಾಮಾಜಿಕ ಜಾಲತಾಣಗಳಲ್ಲಿಯೂ ಬಂದಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ಮೂರು ವರ್ಷಗಳ ಹಿಂದೆಯೇ ಗವಿಸಿದ್ಧೇಶ್ವರ ರೈಲು ನಿಲ್ದಾಣ ಎಂದು ಕೊಪ್ಪಳ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಅಭಿಯಾನ ನಡೆಸಿದಾಗ ಆಗಲೂ ಗವಿಸಿದ್ದೇಶ್ವರರ ಹೆಸರು ಬೇಡ ಎಂದಿದ್ದೆವು. ಈಗಲೂ ಅದನ್ನೇ ಹೇಳುತ್ತಿದ್ದೇವೆ ಎಂದು ತಿಳಿಸಲಾಗಿದೆ.  ‘ಗವಿಸಿದ್ಧೇಶ ನಿಮ್ಮೆಲ್ಲರ ಮನೆಯ ದೇವರು. ಮನದ ದೇವರು. ಎಲ್ಲರ ಹೃದಯದಲ್ಲಿಯೇ ಆತನಿರುವಾಗ ಮತ್ತೆ ಪದೇಪದೆ ಬೇಡವಾದ ವಿಷಯವನ್ನು ಮೊದಲೇ ಪ್ರಕಟಣೆ ಮೂಲಕ ತಿಳಿಸಿದ ವಿಷಯವನ್ನು ಚರ್ಚಿಸುವುದರಲ್ಲಿ ಅರ್ಥವಿಲ್ಲ. ಕೊಪ್ಪಳ ನಗರದ ಯಾವುದೇ ಸಾರ್ವಜನಿಕ ಸ್ಥಳಕ್ಕಾಗಿ, ಈ ನೆಲಕ್ಕಾಗಿ, ದುಡಿದ, ಮಡಿದ ಹಾಗೂ ಸೇವೆ ಸಲ್ಲಿಸಿದ ಯಾವುದೇ ಮಹನೀಯರ ಹೆಸರನ್ನಾದರೂ ನಾಮಕರಣ ಮಾಡಿ. ಅವರೆಲ್ಲರ ಹೃದಯದಲ್ಲಿ ಗವಿಸಿದ್ಧೇಶ್ವರನೇ ಇರುವಾಗ ಪ್ರತ್ಯೇಕಿಸಿ ನೋಡುವ ದೃಷ್ಟಿಕೋನ ಒಳ್ಳೆಯದಲ್ಲ. ಮುಂದೆಯೂ ಇಂಥ ಯಾವುದೇ ಅನಗತ್ಯ ಕಾರ್ಯಗಳನ್ನು ಮಾಡಬೇಡಿ. ಸಮಾಜದಲ್ಲಿ ಮಾಡಲು ಸಾವಿರಾರು ಪುಣ್ಯದ ಕೆಲಸಗಳಿವೆ. ಅದು ಆತನ ಸೇವೆಯೆಂದೇ ಮಾಡೋಣ. ಆತನ ಹೆಸರು ನಿಮ್ಮ ಉಸಿರಿನಲ್ಲಿರುವಾಗ ಮತ್ತೊಂದಕ್ಕೆ ಹೆಸರು ಬೇಕಿಲ್ಲ ಎಂದು ಶ್ರೀಮಠ ತಿಳಿಸಿದೆ.

Total Views 40
RELATED ARTICLES

Most Popular

Recent Comments

KNN City News
Home
E-Paper