
ಬೆಳಗಾವಿ
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಾಂಜಾಗಾಗಿ ಗಲಾಟೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಿಂಡಲಗಾ ಜೈಲಿಗೆ ಹೊರಗಿನಿಂದ ರಾಜಾರೋಷವಾಗಿ ಗಾಂಜಾ ಪ್ಯಾಕೆಟ್ ಸರಬರಾಜು ಆಗುತ್ತಿದೆ. ಗಾಂಜಾ ಸಲುವಾಗಿ ಸಹಾಯಕ ಜೈಲರ್ ಜಿ.ಆರ್ ಕಾಂಬಳೆ ಮೇಲೆ ಹಲ್ಲೆ ವಿಚಾರಣಾಧೀನ ಕೈದಿ ಶಾಹೀದ್ ಖುರೇಶಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.ಬಡಿ.11ರಂದು ಸಂಜೆ ವೇಳೆ ಜೈಲಿನಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಧಿವೇಶನ ಹಿನ್ನೆಲೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಜೈಲು ಅಧಿಕಾರಿಗಳು. ತೀವ್ರವಾಗಿ ಗಾಯಗೊಂಡ ಹಿನ್ನೆಲೆ ಹಿಂಡಲಗಾ ಜೈಲು ವೈದ್ಯರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎನ್‌ಎಸ್ ಕಾಯ್ದೆಯಡಿ 132, 115(2), 352 ಮತ್ತು ಎನ್‌ಡಿಪಿಎಸ್ ಕಾಯ್ದೆ 42 ಅಡಿಯಲ್ಲಿ ಕೇಸ್ ದಾಖಲು.
ಹಲ್ಲೆ ಮಾಡಿದ ಕೈದಿ ಶಾಹೀದ್ ಖುರೇಶಿ ವಿರುದ್ಧ ದೂರು ದಾಖಲಿಸಿದ ಮುಖ್ಯ ಅಧೀಕ್ಷಕ ಕೃಷ್ಣಮೂರ್ತಿ. ಜೈಲಿನ ಸರ್ಕಲ್ 2ನ ಬ್ಯಾರಕ್ ಸಂಖ್ಯೆ 8ರ ಹಿಂಬಾಗದ ಗೋಡೆ ಬಳಿ ಘಟನ ನಡೆದಿದೆ.
ಸಹಾಯಕ ಜೈಲರ್ ರೌಂಡ್ಸ್ ಮಾಡುವ ವೇಳೆ ಶಾಹಿದ್ ಖುರೇಶಿ ಕೈಯಲ್ಲಿ ಸಿಕ್ಕಿದ್ದ ಪ್ಲಾಸ್ಟಿಕ್ ಸುತ್ತಿದ್ದ ಪ್ಯಾಕೆಟ್ ನ್ನು ಕಿತ್ತುಕೊಂಡು ಪರಿಶೀಲನೆ ನಡೆಸಲು ಮುಂದಾದಾಗ ಕೈದಿ ಹಲ್ಲೆ ಮಾಡಿದ್ದಾನೆ.ಹಲ್ಲೆ ಮಾಡಿ ಗಾಂಜಾ ಪ್ಯಾಕೆಟ್ ಜೈಲಿನಿಂದ ಹೊರ ಎಸೆದಿದ್ದ ಕೈದಿ. ಹೊರಗಡೆಯಿಂದ ಕೈದಿಗಳಿಗೆ ಪ್ಯಾಕೆಟ್ ಗಳಲ್ಲಿ ಪಾರ್ಸಲ್ ಆಗುತ್ತಿದೆಯಾ ಗಾಂಜಾ ಎನ್ನುವ ಪ್ರಶ್ನೆ ಉದ್ಬವವಾಗಿದೆ.
ರಾಜಾರೋಷವಾಗಿ ಗಾಂಜಾ ಬರ್ತಿದ್ರೂ ತಡೆಯುವಲ್ಲಿ ವಿಫಲ ಆಗಿದೆ ಹಿಂಡಲಗಾ ಜೈಲಿನ ಅಧಿಕಾರಿಗಳು. ಈ ಕುರಿತು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಗ್ರಾಮೀಣ ಠಾಣೆ ಪೊಲೀಸರು ಹಲವರನ್ನು ವಿಚಾರಣೆ ನಡೆಸಿದ್ದಾರೆ.
