Monday, November 23, 2026
HomeBelagaviಹುಕ್ಕೇರಿಯಲ್ಲಿ ಕಳ್ಳರ ಅಟ್ಟಹಾಸ: ಕೈ ಕಟ್ಟಿ ಕುಳಿತ ಪೊಲೀಸರು

ಹುಕ್ಕೇರಿಯಲ್ಲಿ ಕಳ್ಳರ ಅಟ್ಟಹಾಸ: ಕೈ ಕಟ್ಟಿ ಕುಳಿತ ಪೊಲೀಸರು

 

 

ಬೆಳಗಾವಿ
ಹುಕ್ಕೇರಿ: ಪಟ್ಟಣದಲ್ಲಿ ಕಳ್ಳರ ಅಟ್ಟಹಾಸ ಮುಂದುವರೆದಿದೆ. ದಿನನಿತ್ಯ ಕಳ್ಳತನವಾಗುತ್ತಿದ್ದರೂ ಹುಕ್ಕೇರಿ ಪೊಲೀಸರು ಡೋಂಟ್ ಕೇರ್. ಒಂದು ದಿನ ಕಳ್ಳತನ ಆದರೇ ಪೊಲೀಸರು ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತರಾಗುತ್ತಾರೆ. ಆದರೆ ಹುಕ್ಕೇರಿ ಪಟ್ಟಣದಲ್ಲಿ ದಿನನಿತ್ಯ ಕಳ್ಳತನ ಪ್ರಕರಣ ದಾಖಲಾಗುತ್ತಿದ್ದರೂ ಪೊಲೀಸರು ಮಾತ್ರ ಚಿರನಿದ್ರೆಯಲ್ಲಿದ್ದಾರೆ.ಕಳ್ಳತನ ಪ್ರಕರಣ ದಾಖಲಾಸಿಕೊಳ್ಳಿ ಎಂದರೇ ಹುಕ್ಕೇರಿ ಪೊಲೀಸ್ ಅಧಿಕಾರಿ ಕಳ್ಳತನವಾಗಲಿ ಬಿಡಿ ನಿಮಗೇನೂ ಕಡಿಮೆ ಇದೆ ಎನ್ನುವ ಉದ್ಧಟತನದ ಮಾತುಗಳನ್ನ ಹೇಳುತ್ತಿರುವದು ದುರ್ದೈವ. ಎರಡು ದಿನಗಳ ಹಿಂದೆಯಷ್ಟೆ ಹುಕ್ಕೇರಿ ಪಟ್ಟಣದ ಕೋರ್ಟ ವೃತ್ತದಲ್ಲಿರುವ ದಿನಸಿ ಅಂಗಡಿಗೆ ಕನ್ನ ಹಾಕಿದ್ದರೂ ಘಟನೆ ಮಾಸುವ ಮುನ್ನವೇ ಇಂದು ಹುಕ್ಕೇರಿ ಪಟ್ಟಣದ ಬುದ್ಧ ಬಸವ ಅಂಬೇಡ್ಕರ ಸಹಕಾರಿ ಬ್ಯಾಂಕಿನ‌ ಶಟರ್ ಒಡೆದು ಕಳ್ಳರು ಕನ್ನ ಹಾಕಿ ಪರಾರಿಯಾಗಿದ್ದಾರೆ. ಕಳ್ಳರನ್ನ ಹಿಡಿಯುವ ಬದಲು ಪೊಲೀಸರು ಪೊಲೀಸ್ ಠಾಣೆಯ ಸಣ್ಣ ಪುಟ್ಟ ಪ್ರಕರಣಗಳನ್ನ ಮುಗಿಸುವದರಲ್ಲಿ ಕಾಲ ಹರಣ ಮಾಡುತ್ತಿದ್ದಾರೆ.ಅಷ್ಟೇ ಅಲ್ಲದೇ ಕೇವಲ ಹೆಲ್ಮೇಟ್ ಹಾಕದವರನ್ನ, ಮದ್ಯ ಸೇವಿಸಿ ವಾಹನ ಚಲಾಯಿಸುವರನ್ನ ಹಿಡಿದು ದಂಡ ಹಾಕುವದರಲ್ಲಿ ಬ್ಯೂಸಿ ಆಗಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಗೆ ಪಿಐ ಆಗಿ ಅಧಿಕಾರ ವಹಿಸಿದಾಗಿನಿಂದಲೂ ಇದುವರೆಗೂ ಒಂದೇ ಒಂದು ಕಳ್ಳತ‌ನ‌ ಪ್ರಕರಣ ಬೇಧಿಸುವಲ್ಲಿ ಪೊಲೀಸ್ ಮಹಾನುಭಾವರು ಮುಂದಾಗಿಲ್ಲ‌‌. ಹೀಗೆ ದಿನನಿತ್ಯ ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಪೊಲೀಸರು ನಮಗೇಕೆ ಬೇಕು ಎನ್ನುವ ಬೇಸರವನ್ನ ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ಹುಕ್ಕೇರಿ ಪೊಲೀಸ ಠಾಣೆಯ ಕೆಲ ಸಿಬ್ಬಂದಿಗಳು ಕೇವಲ ಡೀಲ್ ಮಾಡಿಕೊಳ್ಳುತ್ತಿದ್ದು ಸಾರ್ವಜನಿಕರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಇನ್ನೂ ಬಹಳಷ್ಟು ಕಳ್ಳತನ ಪ್ರಕರಣಗಳನ್ನ ದಾಖಲಿಸಿಕೊಳ್ಳದೇ ಸಬೂಬು ಹೇಳಿ ಕಳಿಸುತ್ತಿದ್ದಾರೆ.ಹುಕ್ಕೇರಿ ಪೊಲೀಸರ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ಮಲಗಿರುವ ಹುಕ್ಕೇರಿ ಪೊಲೀಸರನ್ನ ಬಡಿದೆಬ್ಬಿಸುತ್ತಾರಾ ಎನ್ನುವದನ್ನ ಕಾಯ್ದು ನೋಡಬೇಕಿದೆ.

Total Views 139
RELATED ARTICLES

Most Popular

Recent Comments

KNN City News
Home
E-Paper