* ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಮಟ್ಟದ ನೆಕ್ಸಸ್ ಆಫ್ ಗುಡ್ ಫೌಂಡೇಷನ್, 2024ನೇ ಸಾಲಿನ ನೆಕ್ಸಸ್ ಉತ್ತಮ ವಾರ್ಷಿಕ ಪ್ರಶಸ್ತಿ ಸ್ವೀಕರಿಸಿದ ಡಿಸಿ ನಲಿನ್ ಅತುಲ್
ಕನ್ನಡಮ್ಮ ಸುದ್ದಿ-ಕೊಪ್ಪಳ::
ರಾಜ್ಯ, ದೇಶದಲ್ಲಿ ಮಾದರಿ ಆಗಿರುವ ಜಿಲ್ಲೆಯ ಶಾಲಾಪೂರ್ವ ಶಿಕ್ಷಣ ತರಬೇತಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಗೆ ರಾಷ್ಟ್ರಮಟ್ಟದ 2024ನೇ ಸಾಲಿನ ನೆಕ್ಸಸ್ ವಾರ್ಷಿಕ ಉತ್ತಮ ಪ್ರಶಸ್ತಿ ಲಭಿಸಿದೆ.
ರಾಜ್ಯ ಹಾಗೂ ದೇಶದಲ್ಲಿ ಮಾದರಿ ಆಗುವಂತೆ ಕೊಪ್ಪಳದಲ್ಲಿ ಶಾಲಾಪೂರ್ವ ಶಿಕ್ಷಣ ಅನುಷ್ಠಾನಗೊಳಿಸಲಾಗುತ್ತಿದೆ. 64 ಸಾವಿರ ಮಕ್ಕಳು ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ. ರಾಷ್ಟ್ರಮಟ್ಟದ ನೆಕ್ಸಸ್ ಆಫ್ ಗುಡ್ ಫೌಂಡೇಷನ್, 2024ನೇ ಸಾಲಿನ ನೆಕ್ಸಸ್ ಉತ್ತಮ ವಾರ್ಷಿಕ ಪ್ರಶಸ್ತಿಗೆ ಜಿಲ್ಲೆಯನ್ನು ಆಯ್ಕೆ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣ ಪರಿಣಾಮಕಾರಿ ಯಾಗಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಕ್ಕೆ ನೆಕ್ಸಸ್ ವಾರ್ಷಿಕ ಉತ್ತಮ ಪ್ರಶಸ್ತಿಯನ್ನು.ನವದೆಹಲಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಮಗುವಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಾಲಾಪೂರ್ವ ಶಿಕ್ಷಣ (ಅಂಗನವಾಡಿ) ಮಹತ್ವ ಪಡೆದಿದೆ. ಆಟದೊಂದಿಗೆ ಪಾಠ, ಪಕ್ಷೇತರ ಚಟುವಟಿಕೆಗಳ ಮೂಲಕವೇ ಬೌದ್ಧಿಕ ಮಟ್ಟ ಬೆಳವಣಿಗೆ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಯೋಜನೆ ಪ್ರಾಯೋಗಿತವಾಗಿ ಜಾರಿ ಮಾಡಲಾಗಿದೆ.

ಕಕ ಭಾಗದ 14 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೊಳಿಸಲಾಗಿದೆ. 10 ಹಂತಗಳಲ್ಲಿ ಯೋಜನೆ ರೂಪಿಸಲಾಗಿದೆ. ಈಗಾಗಲೇ ಐದು ಹಂತಗಳಲ್ಲಿ ಪರಿಚಯಿಸಲಾಗುತ್ತಿದೆ. ಉಳಿದ ಜಿಲ್ಲೆಗಳಿಗಿಂತ ಕೊಪ್ಪಳ ಜಿಲ್ಲೆಯ 1,960 ಅಂಗನವಾಡಿ ಕೇಂದ್ರಗಳಲ್ಲಿ ಯೋಜನೆ ಅನುಷ್ಠಾನ ಪರಿಣಾಮಕಾರಿಯಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಅಧ್ಯಯನ ತಂಡಗಳು ಇಲ್ಲಿಗೆ ಆಗಮಿಸಿ ಅಧ್ಯಯನ ನಡೆಸಿ ತೆರಳಿದ್ದವು. 

ಶಾಲಾ ಪೂರ್ವ ಶಿಕ್ಷಣ ತಜ್ಞೆ ಡಾ.ಉಪಾ ಅಬ್ರಾಲ್, ಬೆಂಗಳೂರಿನ ನಿಪ್ಪಿಡ್ ನಿವೃತ್ತ ನಿರ್ದೇಶಕಿ ಡಾ.ತಾರಾ ತಂಡ ಮಧ್ಯಂತರ ಸಮೀಕ್ಷೆ ಕೈಗೊಂಡು 52 ಅಂಗನವಾಡಿಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಸಮಿತಿ ಮುಖ್ಯಸ್ಥ, ನಿವೃತ್ತ ಐಎಎಸ್ ಅಧಿಕಾರಿ ಜ್ವ ಸಂಜಯ್ ಕೌಲ್ ಭೇಟಿ ನೀಡಿದ್ದರು
ಯೋಜನೆಗೆ 71.73 ಲಕ್ಷ ರೂ. ಅನುದಾನ ಖರ್ಚು ಮಾಡಲಾಗಿದೆ. 31.37 ‘ಲಕ್ಷ ರೂ. ಗಳಲ್ಲಿ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಬಾಕಿ ಅನುದಾನ ತರಬೇತಿ ಸೇರಿ ಇತರ ಕಾರ್ಯಗಳಿಗೆ ಬಳಕೆ ಮಾಡಿದೆ ಎನ್ನಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ 40 ಸಿಡಿಪಿಒಗಳು, 260 ಮೇಲ್ವಿಚಾರಕಿಯರ ತಂಡ, ಉತ್ತರ ಪ್ರದೇಶ, ಮೇಘಾಲಯ, ರಾಜಸ್ಥಾನ, ಆಂಧ್ರ ಪ್ರದೇಶ, ಛತ್ತಿಸಗಡದಿಂದ ಜಿಲ್ಲೆಗೆ ತಂಡಗಳು ಆಗಮಿಸಿದ್ದು. ಮುಖ್ಯವಾಗಿ ಅಗಾಖಾನ್ ಫೌಂಡೇಷನ್, ಯುನಿಸೆಫ್, ಎಪಿಎಫ್, ವಿಸಿಎಫ್. ಟಾಟಾ ಟ್ರಸ್ಟ್ಗಳು ಆಗಮಿಸಿ ವರದಿ ಪಡೆದಿದ್ದವು.
ರಾಷ್ಟ್ರೀಯ ಶಾಲಾ ಪೂರ್ವ ಶಿಕ್ಷಣ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಕ್ಕೆ ಪ್ರಶಸ್ತಿ ಲಭಿಸಿದ್ದು, ಇನ್ನೂ ಹೆಚ್ಚು ಪರಿಣಾಮಕಾರಿ ಹಾಗೂ ಜವಾಬ್ದಾರಿ ಯಿಂದ ಕೆಲಸ ಮಾಡಲು ಅವಕಾಶ ಸಿಕ್ಕಿದೆ: ನಲಿನ್ ಅತುಲ್, ಜಿಲ್ಲಾಧಿಕಾರಿಗಳು.
ರಾಷ್ಟ್ರೀಯ ಶಾಲಾ ಪೂರ್ವ ಶಿಕ್ಷಣ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಕ್ಕೆ ಪ್ರಶಸ್ತಿ ಲಭಿಸಿದ್ದು, ಇನ್ನೂ ಹೆಚ್ಚು ಪರಿಣಾಮಕಾರಿ ಹಾಗೂ ಜವಾಬ್ದಾರಿ ಯಿಂದ ಕೆಲಸ ಮಾಡಲು ಅವಕಾಶ ಸಿಕ್ಕಿದೆ: ನಲಿನ್ ಅತುಲ್, ಜಿಲ್ಲಾಧಿಕಾರಿಗಳು.