Monday, November 23, 2026
HomeBelagaviಕೊನೆಗೂ ಸಿ.ಟಿ.ರವಿ ಬೆಳಗಾವಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಕೊನೆಗೂ ಸಿ.ಟಿ.ರವಿ ಬೆಳಗಾವಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಬೆಳಗಾವಿ
ಬೆಳಗಾವಿಯ ಸುವರ್ಣ ವಿಧಾನಸೌಧದ ಪರಿಷತ್ತಿನ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಾಜಿ ಸಚಿವ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಪೊಲೀಸರು ಶುಕ್ರವಾರ ಬೆಳಗಾವಿ ‌ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು‌.
ಸುವರ್ಣಸೌಧದಿಂದ 12 ಕೀಮಿ ದೂರದ ಕೋರ್ಟ್ ಗೆ ಸಿ ಟಿ ರವಿ ಸುತ್ತಿಸಿ ಸುತ್ತಿಸಿ ಕರೆ ತಂದ ಪೊಲೀಸರು. ಹಿರೇಬಾಗೇವಾಡಿ,ಖಾನಾಪುರ,ನಂದಘಡ,ಸವದತ್ತಿ, ಲೋಕಾಪುರ ಯರಗಟ್ಟಿ ಸುತ್ತಿಸಿ ನ್ಯಾಯಾಲಯಕ್ಕೆ ಕರೆ ತಂದಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ ಪೊಲೀಸರ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ 12 ಕೀಮಿ ದೂರದ ಕೋರ್ಟ್ ಗೆ ಇಷ್ಟು ಸುತ್ತಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಕಡೆಗೂ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು.ಸಿ ಟಿ ರವಿ ಕೋರ್ಟ್ ಬರುವ ವಿಷಯ ತಿಳಿದು ಕೋರ್ಟ್ ಮುಂದೆ ಜಮಾವಣೆಯಾದ ಬಿಜೆಪಿ ಬಟಾಲಿಯನ್. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿ ಹಲವು ನಾಯಕರ ಹಾಜರಿದ್ದರು‌ ರಾತ್ರಿಯಿಡಿ ಜಾಗರಣೆ ಮುಗಿಸಿ ಕೋರ್ಟ್ ಗೆ ಹಾಜರಾದ ಪರಿಷತ್ ಸದಸ್ಯ ಸಿ ಟಿ ರವಿ ಪರವಾಗಿ ನ್ಯಾಯವಾದಿ ಎಂ.ಬಿ.ಜೀರಲಿ ವಾದ ಮಂಡಿಸಲಿದ್ದಾರೆ.

Total Views 191
RELATED ARTICLES

Most Popular

Recent Comments

KNN City News
Home
E-Paper