ಕನ್ನಡಮ್ಮ ಸುದ್ದಿ-ಕೊಪ್ಪಳ : ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ (ಕೆ ಎಸ್ ಸಿ ಡಬ್ಲ್ಯೂ ಸಿ ಯು) ವತಿಯಿಂದ ಬೆಂಗಳೂರಿನ ಪುಟ್ಟಣ್ಣ ಚಟ್ಟಿ ಪುರ ಭವನ್ ದಲ್ಲಿ ದಿನಾಂಕ 26ರ ಗುರುವಾರ ಕಟ್ಟಡ ಕಾರ್ಮಿಕರ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಯಲಿದೆ ಎಂದು ಸಂಘದ ಜಿಲ್ಲಾ ಸಂಚಾಲಕ ಎಸ್ ಮಹದೇವಪ್ಪ ಹೇಳಿದರು,
ಅವರು ಪತ್ರಿಕಾ ಭವನ್ ದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರದ್ದುಪಡಿಸಿರುವ ಕಟ್ಟಡ ಕಾರ್ಮಿಕರ ಎರಡು ಕಾನೂನು ಪುನಃ ಸ್ಥಾಪನೆ ಮಾಡಬೇಕು ಇದರ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲಾಗುವುದು, ಕಾರ್ಮಿಕರಿಗೆ ಲೇಬರ್ ಕೋಡ್ ಗಳನ್ನು ಅನುಷ್ಠಾನಗೊಳಿಸುವುದನ್ನು ನಿಲ್ಲಿಸಬೇಕು ಎಂದರು.
ವೃತ್ತಿವಾರು ಮಂಡಳಿಗಳನ್ನು ಸ್ಥಾಪಿಸಿ ಸರ್ಕಾರದ ಬಜೆಟ್ ನಿಂದ ಶೇಕಡ ಮೂರರಿಂದ ಐದು ಪರ್ಸೆಂಟ್ ಹಣ ಮೀಸಲಿಟ್ಟು ಎಲ್ಲಾ ಆಸಗಂಟಿತ ಕಾರ್ಮಿಕರಿಗೆ ಸಾಮಾಜಿಕ ಸೌಲಭ್ಯ ಒದಗಿಸಬೇಕು, ಇತ್ಯಾದಿ ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಮೈಲಪ್ಪ ಕಂಬದ ಮಟ್ಟಿ, ಬೀರಪ್ಪ ಲೇಬುಗೇರಿ ,ಸಂತೋಷ್ ಕೆ ಅಳವಂಡಿ ಇತರರು ಇದ್ದರು.
