
ಬೆಳಗಾವಿ
ಬೆಳಗಾವಿ ನಗರದ ವಿದ್ಯುತ್ ದೀಪಾಲಂಕಾರವನ್ನು ರಾಜ್ಯದ ಜನರು ಬಂದು ಕಣ್ತುಂಬಿಕೊಳ್ಳಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಿತ್ತೂರು ಕರ್ನಾಟಕ ಜನತೆಯ ಜೊತೆಗೆ ಕರ್ನಾಟಕದ ಜನರು ಬೆಳಗಾವಿಗೆ ಬಂದು ವಿದ್ಯುತ್ ದ್ವೀಪದ ಅಲಂಕಾರ ಕಣ್ತುಂಬಿಸಿಕೊಳ್ಳಿ ಇಲ್ಲಿ ಪಾರ್ಟಿ, ಪಕ್ಷ ಎಂದು ನೋಡಬೇಡಿ. ಎಲ್ಲ ಕಡೆಯಿಂದ ಪಕ್ಷಾತೀತವಾಗಿ ಗಾಂಧಿ ಶತಮಾನೋತ್ಸವದ ಅಧಿವೇಧನಕ್ಕೆ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಎಐಸಿಸಿಯ ನಾಯಕರು ಬೆಳಗಾವಿಗೆ ಬರುತ್ತದ್ದಾರೆ. ಬಿಜೆಪಿಯವರು ಬೆಳಗಾವಿ ಚಲೋ ಬಗ್ಗೆ ಯಾಕೆ ಗಾಂಧಿ ಅಧಿವೇಶನದ ಬಗ್ಗೆ ಮಾತನಾಡಿ ಎಂದರು.
ಡಿ. 26 ರಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕೋರ್ ಕಮಿಟಿ ಸಭೆ ನಡೆಸಯಲಿದೆ. ಡಿ.27 ರಂದು ಸುವರ್ಣ ವಿಧಾನಸೌಧದಲ್ಲಿ ಬೆಳಗ್ಗೆ ಬೃಹತ್ ಗಾಂಧಿ ಪ್ರತಿಮೆ ಅನಾವರಣ ಮಾಡುತ್ತೇವೆ. ಮಧ್ಯಾಹ್ನ 3ಕ್ಕೆ ಬೃಹತ್ ಕಾಂಗ್ರೆಸ್ ಸಮಾವೇಶ ನಡೆದಲಾಗುತ್ತಿದೆ ಎಂದರು.
ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಎಲ್ಲಿ ವಾಸ್ತವ್ಯ ಮಾಡಬೇಕೆಂದು ಭದ್ರತಾ ದೃಷ್ಟಿಯಿಂದ ಎಸ್ ಪಿಜಿ ಅವರು ನಿರ್ಧಾರ ಮಾಡುತ್ತಾರೆ. ಆದರೆ ಕಾಂಗ್ರೆಸ್ ನಾಯಕರು ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದರು.
