
ಬೆಳಗಾವಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಆಹಾರ ಸಚಿವ ಕೆ.ಎಚ.ಮುನಿಯಪ್ಪ ಕಂಬನಿ ಮಿಡಿದಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮನಮೋಹನ್ ಸಿಂಗ್ ನಿಧನ ನೋವು ತಂದಿದೆ. ಅವರು ದೇಶದಲ್ಲಿ ಉತ್ತಮವಾದ ಆಡಳಿತ ಕೊಟ್ಟವರು. ಪ್ರಧಾನಮಂತ್ರಿ ಇದ್ದಾಗ ಉತ್ತಮ ಜನಪರ ಯೋಜನೆ ಜಾರಿ ಮಾಡಿದ್ದರು. ನಾನು ಅವರ ಪ್ರಧಾನಮಂತ್ರಿ ಇದ್ದಾಗ ಸಚಿವನಾಗಿ ಕೆಲಸ ಮಾಡಿರುವೆ ಎಂದರು.
ದೇಶದಲ್ಲಿ ವಿದ್ಯಾವಂತರ ಪರ ಯೋಜನೆ ರೂಪಿಸಿದ್ದರು.ಉದ್ಯಮ ಬೆಳವಣಿಗೆ ಗೆ ಒತ್ತುಕೊಟ್ಟಿದ್ದರು. ಅವರು ಜಾರಿಗೆ ತಂದಿದ್ದ ಮನರೇಗಾ, ಆದಾರ್ ಕಾಡ್೯, ಜಿಎಸ್ ಟಿ ಯೋಜನೆ ಇಂದಿಗೂ ದೇಶದಲ್ಲಿ ಚಾಯ್ತಿಯಲ್ಲಿವೆ ಎಂದರು.
