Monday, November 23, 2026
HomeBelagaviಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪುಂಡಾಟ ಮಾಡಿದ್ರೆ ಹುಷಾರ್: ಎಸ್ಪಿ ಎಚ್ಚರಿಕೆ

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪುಂಡಾಟ ಮಾಡಿದ್ರೆ ಹುಷಾರ್: ಎಸ್ಪಿ ಎಚ್ಚರಿಕೆ

ಬೆಳಗಾವಿ
ಹೊಸ‌ ವರ್ಷದ ಸಂಭ್ರಮಾಚರಣೆಯಲ್ಲಿ ಕುಡಿದು ವಾಹನ‌ ಚಲಾವಣೆ, ಗಲಾಟೆ ಮಾಡುವ ಕಿಡಿಗೇಡಿಗಳ ವಿರುದ್ಧ ಮುಲ್ಲಾಜಿಲ್ಲದೆ ಕ್ರಮ‌ಕ ಜರುಗಿಸಲಾಗುವುದು ಎಂದು ಪ್ರಭಾರ ಎಸ್ಪಿ ಅಮರನಾಥ್ ರೆಡ್ಡಿ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ ಜಿಲ್ಲೆಯಾದ್ಯಂತ ಪ್ರವಾಸಿ ತಾಣಗಳಲ್ಲಿ ಚೆಕ್ ಪೋಸ್ಟ್ ‌ನಿರ್ಮಾಣ ಮಾಡಲಾಗಿದೆ ಎಂದರು.
ವಾಹನಗಳಲ್ಲಿ ಕುಡಿದು ಗಲಾಟೆ ಮಾಡುವುದಾಗಲಿ, ಬೈಕ್ ನಲ್ಲಿ ಮೂರ್ನಾಲ್ಕು ಜನ ತೆರಳುವುದಾಗಲಿ ಮಾಡಬಾರದು. ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿರಬೇಕು. ಸ್ವಿಮಿಂಗ್ ಫುಲ್ಸ್ ಇದ್ದರೆ ಅಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಾದ್ಯಂತ 5 ಕೆಎಸ್ಆರ್ ಪಿ ಸೇರಿದಂತೆ ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಮಹಾಂತೇಶ ಕುಂಜ್ಜಿಕರ ಬೆಳಗಾವಿಯ ಶಹಾಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಪ್ರತಿ ವರ್ಷ ಪ್ರವಾಸಕ್ಕೆ ತೆರಳುತ್ತಾರೆ. ಅದರಂತೆ ಖಾನಾಪುರ ತಾಲೂಕಿನ ರೆಸಾಟ್೯ ಒಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಅಲ್ಲಿ ಸಿಸಿ ಟಿವಿ ದೃಶ್ಯಾವಳಿಗಳು ಸಿಕ್ಕಿಲ್ಲ. ರೆಸಾರ್ಟ್ ನವರದ್ದು ತಪ್ಪಿದೆ. ಎರಡೂ ಲೋಪದೋಷಗಳು ಇವೆ. ರಜಪೂತ ಎಂಬುವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದರು.

 

Total Views 173
RELATED ARTICLES

Most Popular

Recent Comments

KNN City News
Home
E-Paper