Monday, November 23, 2026
HomeBelagaviಶಾಲಾ ವಿದ್ಯಾರ್ಥಿಗೆ ಚಾಕು ಇರಿತ: ಗಂಭೀರ ಗಾಯ

ಶಾಲಾ ವಿದ್ಯಾರ್ಥಿಗೆ ಚಾಕು ಇರಿತ: ಗಂಭೀರ ಗಾಯ

ಗೋಕಾಕ್
ಗೋಕಾಕ ನಗರದಲ್ಲಿರುವ ಸರಕಾರಿ ಪ್ರೌಡ ಶಾಲೆಯ ಪಕ್ಕದಲ್ಲಿರುವ ವಾಲ್ಮೀಕಿ ಮೈದಾನದಲ್ಲಿ ಮೂವರು ವಿದ್ಯಾರ್ಥಿಗಳಿಂದ ಓರ್ವ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ಗುರುವಾರ ನಡೆದಿದೆ.
ಸಂಜೆ ಶಾಲೆ ಬಿಟ್ಟ ನಂತರ 10 ನೇ ತರಗತಿಯ ವಿದ್ಯಾರ್ಥಿ ಪ್ರದೀಪ ಬಂಡಿವಡ್ಡರ ಇತನಿಗೆ ಸಹಪಾಠಿಗಳು ತಮ್ಮ ಬ್ಯಾಗ ತರಲು ಹೇಳಿದ್ದರು,ಆಗ ಆತ ಬ್ಯಾಗ ತರಲು ನಿರಾಕರಿಸಿದ್ದಕ್ಕೆ ಆಕ್ರೊಶಗೊಂಡು ಮೂವರು ಸೇರಿ ಕುತ್ತಿಗೆ,ಕೈಗೆ, ಮತ್ತು ಹೊಟ್ಟೆಗೆ ಮನಸೋ ಇಚ್ಚೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ,
ರಕ್ತ ಸ್ರಾವದಿಂದ ಸ್ಥಳದಲ್ಲಿ ಬಿದ್ದು ನರಳಾಡುತಿದ್ದ ಗಾಯಾಳು ಪ್ರದೀಪ ಬಂಡಿವಡ್ಡರ ಇತನನ್ನು ಸ್ಥಳಿಯ ಶಿಕ್ಷಕರು ಚಿಕಿತ್ಸೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು,ನಂತರ ಹೆಚ್ವಿನ ಚಿಕಿತ್ಸೆಗಾಗಿ ನಗರದ ಖಾಸಗಿ ಗಂಗಾ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿದ್ದಾರೆ, ಸುದ್ದಿ ತಿಳಿದ ನಗರ ಪೋಲಿಸ ಸಿಬ್ಬಂದಿಗಳು ಆಸ್ಪತ್ರೆಗೆ ದೌಡಾಯಿಸಿ ಹಲ್ಲೆಗೊಳಗಾದವನಿಂದ ಮಾಹಿತಿ ಕಲೆ ಹಾಕಿದ್ದಾರೆ, ಇನ್ನು ಆರೋಪಿಗಳು ಮತ್ತು ಗಾಯಾಳು ಒಂದೆ ಶಾಲೆಯಲ್ಲಿ 10 ನೇಯ ತರಗತಿಯಲ್ಲಿ ಅಬ್ಯಾಸ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಆರೋಪಿಗಳ ಪತ್ತೆ ಹಚ್ವಲು ಪೋಲಿಸರು ಬಲೆ ಬಿಸಿದ್ದು, ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

 

Total Views 94
RELATED ARTICLES

Most Popular

Recent Comments

KNN City News
Home
E-Paper