
ಬೆಳಗಾವಿ
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸುವಾಗಲೂ ಆ್ಯಂಬುಲೆನ್ಸ್ ತಡೆದು ಹಲ್ಲೆ ಮಾಡಿದ ಘಟನೆ ಕ್ಲಬ್ ರಸ್ತೆಯ ಗಾಲ್ಪ್ ಮೈದಾನದ ಮುಂಭಾಗದಲ್ಲಿ ಬುಧವಾರ ರಾತ್ರಿ ನಡೆದಿದೆ.
ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ವಿಜಯ್ ಪರಶುರಾಮ್ ಚವ್ಹಾಣ್ (33) ಹಲ್ಲೆಗೊಳಗಾದ ವ್ಯಕ್ತಿ. ಬಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಸುನಿಲ್ ಅರವನ್ ಎಂಬಾತನೊಂದಿಗೆ ಹಣಕಾಸಿನ ವ್ಯವಹಾರ ಇತ್ತು. ಇದೇ ವಿಚಾರಕ್ಕೆ ರಾತ್ರಿ ಮೊದಲು ಸುಳಗಾ ಗ್ರಾಮದಲ್ಲಿ ಹಲ್ಲೆ ಮಾಡಿದ್ದಾನೆ. ಬಳಿಕ ಗಾಲ್ಫ್ ಮೈದಾನದ ಬಳಿ ಚಲಿಸುತ್ತಿದ್ದ ಆ್ಯಂಬುಲೆನ್ಸ್ ನಿಲ್ಲಿಸಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
KA 51 G 5145 ಆ್ಯಂಬುಲೆನ್ಸ್ ಗೆ ಅಡ್ಡಹಾಕಿ ಮೇಲೆ ಹಲ್ಲೆ ಮಾಡಿದ್ದು ಕಾಕತಿ ಹಾಗೂ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.
