Monday, November 23, 2026
HomeKoppalಸಂವಿಧಾನಕ್ಕಾಗಿ ನಾವು ನಮಗಾಗಿ ಸಂವಿಧಾನ - ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಒಂದು ವಿಶೇಷ ಅಭಿಯಾನ

ಸಂವಿಧಾನಕ್ಕಾಗಿ ನಾವು ನಮಗಾಗಿ ಸಂವಿಧಾನ – ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಒಂದು ವಿಶೇಷ ಅಭಿಯಾನ

ಸಮಾಜದಲ್ಲಿ ಕಾನೂನು ಹಾಗೂ ಸರಕಾರಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವಲ್ಲಿ ಹಲವು ಜನರು ನಿರತರಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಅದರ ಮಹತ್ವ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಇಡಿಯುವ ಹಾಗೂ ಅದರ ಸತ್ಯಾಂಶವನ್ನು ಜನರಿಗೆ ಸಾರುವ ಕೆಲಸವನ್ನು ಮಾಡುತ್ತಿರುವದು ಹಲವರು ಮಾತ್ರ.

ಇದಕ್ಕೆ ತಾಜಾ ಉದಾಹರಣೆ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಠದ ಆವತಣದ ಮಳಿಗೆಯಲ್ಲಿ ಹಾಕಲಾಗಿರುವ ಒಂದು ಸ್ವೀಟ್ ಮಾರ್ಟ ಅಂಗಡಿಯ ಮಾಲಿಕರು ಜಾತ್ರೆಯಲ್ಲಿ ಬರುವ ಜನರಿಗೆ ಸಂವಿಧಾನದ ಬಗ್ಗೆ ಅರಿವು  ಮೂಡಿಸುತ್ತಿರುವದರ ವಿಶೇಷತೆ ಕುರಿತು ಹವ್ಯಾಸಿ ಬರಹಗಾರರಾದ ಶಾರದಾ ನಾಗರಾಜ ಆಲೂರ ಅವರು ಈ ಕುರಿತು ತಮ್ಮ ಬರಹದ ಮೂಲಕ ಚಿತ್ರಣವನ್ನು ಬಿಡಿಸಿಟ್ಟಿದ್ದಾರೆ

ನಮ್ಮ ಸಂವಿಧಾನ ನಮ್ಮ ಅಭಿಮಾನ ಭಾರತೀಯ ಧರ್ಮದ ಪವಿತ್ರ ಗ್ರಂಥ ಸಂವಿಧಾನ .ಸಂವಿಧಾನಕ್ಕಾಗಿ ನಾವು ನಮಗಾಗಿ ಸಂವಿಧಾನ ಎನ್ನುವ ಶ್ಲೋಕವನ್ನು ಹಾಕುವ ಮೂಲಕ ನೋಡುಗರ ಕಣ್ಮನ ಸೆಳೆಯುತ್ತಿರುವದನ್ನ ನೋಡಿದ  ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿಗಳು ಹರ್ಷವನ್ನು ವ್ಯಕ್ತಪಡಿಸುತ್ತಿರುವದು ಕಂಡು ಬಂದಿತು.

ಸಂವಿಧಾನದ ಅಡಿಯಲ್ಲಿ ಎಲ್ಲಾ ಸಕಲ ಸೌಲಭ್ಯಗಳನ್ನು ಪಡೆದು ಅಂಬೇಡ್ಕರ್ ಹೆಸರು ಹೆಳಲು ಇಂಜರಿಯುವ ಈ ಕಾಲದಲ್ಲಿ ಅಂತಹ ಉತ್ತರ ಭಾರತದ ಕುಂಭಮೇಳ ಎನ್ನುವ ಖ್ಯಾತಿಯನ್ನು ಪಡೆದ ಜಾತ್ರೆಯಲ್ಲಿ ಅಂಬೇಡ್ಕರ್ ಅವರು ಬರೆದಂತಹ ಸಂವಿಧಾನದ ಬಗ್ಗೆ ಅಭಿಮಾನ ಹೊಂದಿ ಅದರ ಸಾರತ್ವವನ್ನು ಜನರಿಗೆ ತಿಳಿಸುತ್ತಿರುವ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೆಬೇಕು.

ಕೊಪ್ಪಳ ಜಾತ್ರೋತ್ಸವವು ಹಲವು ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮಗಳ‌ಮೂಲಕ ಜನಮನಗಳಿಸಿದ್ದು ಹಾಗೂ ರಾಜ್ಯವಲ್ಲದೆ ದೇಶ ವಿದೇಶಗಳಲ್ಲಿ ಪ್ರಸಿದ್ದಿಯನ್ನು ಪಡೆದಿದೆ ಹಾಗೂ ದೇಶದ ಎರಡನೇ ಕುಂಭಮೇಳ ಎನ್ನುವ ಹೆಸರು ಪಡೆದಿರುವದು ಈ ಭಾಗದ ಜನರ ಭಾಗ್ಯವೇ ಸರಿ. ಕ್ರೀಡೆ. ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮಗಳು.   ಐದು ಸಾವಿರ ವಿದ್ಯಾರ್ಥಿಗಳ ವಸತಿ ನಿಲಯ.ಕೆರೆ ಹಳ್ಳಗಳ ಪುನಶ್ಚೇತನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನ ನೀಡುವಲ್ಲಿ ಮಠ ಸದಾ ಮುಂದಿದ್ದು ಅದರಂತೆ ಜಾತ್ರೆಯಲ್ಲಿ ಮಿಠಾಯಿ ಅಂಗಡಿ ಮಾಲೀಕರು ಜಾಗೃತಿ ಕಾರ್ಯಗಳನ್ನ ಮಾಡುತ್ತಿರುವದು ಶ್ಲಾಘನೀಯವಾಗಿದೆ. @ ವಿಶೇಷ ವರದಿ: ಶಾರದಾ ನಾಗರಾಜ ಆಲೂರ

Total Views 71
RELATED ARTICLES

Most Popular

Recent Comments

KNN City News
Home
E-Paper