ಕನ್ನಡಮ್ಮ ಸುದ್ದಿ-ಕೊಪ್ಪಳ- ಉತ್ತಮ ಕೃಷಿ ಪ್ರಶಸ್ತಿ ವಿಜೇತ ಹಾಗೂ ಸಮಾಜ ಸೇವಕರಾದ ಕೊಪ್ಪಳ ತಾಲೂಕಿನ ಇರಕಲ್ಲಗಡದ ಗ್ರಾಮದ ವೀರಬಸಪ್ಪ ಪಟ್ಟಣಶೆಟ್ಟಿ (9480488127, 9448634025) ಇವರಿಂದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ರಚಿಸಿದ ಭಕ್ತಿಗೀತೆಯನ್ನು ಗರುವಾರ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು.
ಮೂಲತಃ ಕೃಷಿಕರಾದ ಇವರು ತಮ್ಮ 83ನೇ ವಯಸ್ಸಿನಲ್ಲಿ ತಾವೇ ಸ್ವತಃ ಸಾಹಿತ್ಯವನ್ನು ರಚಿಸಿ ಹಾಗೂ ಹಾಡುವುದರ ಮೂಲಕವಾಗಿ ಗವಿಸಿದ್ದೇಶ್ವರನಿಗೆ ತಮ್ಮ ಸಾಹಿತ್ಯದ ನುಡಿ ಸೇವೆಯನ್ನು ಸಲ್ಲಿಸಿದ್ದಾರೆ. ಈ ಭಕ್ತಿ ಗೀತೆಯನ್ನು ಗಾಯಕರಾದ ಬಾಷು ಕಿನ್ನಾಳ ಅವರು ಸಂಗೀತ ಸಂಯೋಜನೆಯೊಂದಿಗೆ ಧ್ವನಿ ಸೇವೆ ಗೈಯುದಿರುತ್ತಾರೆ. ವಿರೇಶಕುಮಾರ ಬೇಟಗೇರಿ ಸಂಕಲಿಸಿರುತ್ತಾರೆ. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರು ಇದ್ದರು. ಸಾಹಿತ್ಯ ರಚನೆಕಾರರಿಗೆ ಪೂಜ್ಯಶ್ರೀಗಳು ಆಶೀರ್ವದಿಸಿದರು.
ಗವಿಸಿದ್ಧ, ಗವಿಸಿದ್ಧ, ಅನ್ನಿರಿ ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.
ತಂದೆತಾಯಿ ಬಂಧು ಬಳಗವೆಲ್ಲ ನೀನೆ ಅನ್ನಿರಿ , ನಿನ್ನ ಹೊರತು ಬೇರೆಯಾರುಇಲ್ಲವೆಂದು ಹೇಳಿರಿ, ಗವಿಸಿದ್ಧ, ಗವಿಸಿದ್ಧ, ಅನ್ನಿರಿ, ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.
ಕಷ್ಟ ಬರಲಿ ಸುಖವೇ ಬರಲಿ ಸ್ವಾಮಿ ನಿನ್ನದೆನ್ನಿರಿ ,ನಿನ್ನಕರುಣೆಎಂದೆ ನಮಗೆ ಸಾಕು ಹೇಳಿ , ಗವಿಸಿದ್ಧ, ಗವಿಸಿದ್ಧ, ಅನ್ನಿರಿ, ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.
ಕಲ್ಲೇಇರಲಿ ಮುಳ್ಳೇ ಬರಲಿ ಎಲ್ಲಾ ನಿನ್ನದೆನ್ನಿರಿ, ನಿನ್ನ ಶ್ರೀರಕ್ಷೆಯೊಂದೇ ಯಮಗೆ ಸಾಕು ಎನ್ನಿರಿ, ಗವಿಸಿದ್ಧ, ಗವಿಸಿದ್ಧ, ಅನ್ನಿರಿ, ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.
ಕಲ್ಲೇಇರಲಿ ಮುಳ್ಳೇ ಇರಲಿ ಎಲ್ಲ ನಿನ್ನದೆನ್ನಿರಿ. ನಿನ್ನ ಶ್ರೀರಕ್ಷೆಯೊಂದೇ ಯಮಗೆ ಸಾಕು ಎನ್ನಿರಿ, ಗವಿಸಿದ್ಧ, ಗವಿಸಿದ್ಧ, ಅನ್ನಿರಿ, ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ.
ಎಲ್ಲೇಇರಲಿ ಹೇಗೆ ಇರಲಿ ಸ್ವಾಮಿ ಸ್ಮರಣೆ ಮಾಡಿರಿ, ಸದಾ ಸ್ಮರಣೆ ಮಾಡಿ ಅವನ ಕೃಪೆಗೆ ಪಾತ್ರರಾಗಿರಿ, ಗವಿಸಿದ್ಧ, ಗವಿಸಿದ್ಧ, ಅನ್ನಿರಿ, ಸ್ವಾಮಿ ಸ್ಮರಣೆ ಮಾಡಿ ಮಹಾನಂದವನ್ನು ಹೊಂದಿರಿ. @ ವೀರಬಸಪ್ಪ ಪಟ್ಟಣಶೆಟ್ಟಿ ಇರಕಲ್ಲಗಡ
