
ಬೆಳಗಾವಿ
ಸೂಪಾರಿ ಕಿಲ್ಲರ್ಸ್ ಗ್ಯಾಂಗ್ ಬಂಧನವಾಗುತ್ತಿದ್ದಂತೆ ಶವ ಸಂಸ್ಕಾರ ಮಾಡಿದ್ದ ಶವವನ್ನು ಹೊರ ತೆಗೆದು ಯಮಕನಮರಡಿ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ನಡೆದಿದೆ.
ಕಳೆದ 9 ತಿಂಗಳ ಹಿಂದೆ ಪತಿಯನ್ನು ಕೊಲೆ ಮಾಡಿ ಹೃದಯಾಘಾತವೆಂದು ಬಿಂಬಿಸಿದ್ದ ಪತ್ನಿ ಮಾಲಾ ಹೃದಯಾಘಾತವೆಂದು ಶವಸಂಸ್ಕಾರ ಮಾಡಿಸಿದ್ದಳು. 9 ತಿಂಗಳು ಹಿಂದೆ ಹುಕ್ಕೇರಿ ಪಟ್ಟಣದ ರುದ್ರಭೂಮಿಯಲ್ಲಿ ಹೂತಿದ್ದ ಮೃತ ಮಹಾಂತೇಶ ಸುಟಗಣ್ಣವರ ಶವ ಹೊರ ತೆಗೆದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಮತ್ತೇ ಅಂತ್ಯಸಂಸ್ಕಾರ ಮಾಡಿದರು.
70 ಸಾವಿರ ರೂ ನೀಡಿ ಸುಪಾರಿ ಕೊಲೆ ಮಾಡಿಸಿದ್ದ ಆರೋಪಿ ಮಾಲಾ ಕೊಲೆ ಮಾಡಿ ರಾತ್ರಿ ಮನೆಗೆ ಶವ ತಂದಿಟ್ಟು ಹೋಗಿದ್ದ ಸುಪಾರಿ ಕಿಲ್ಲರ್ಸ ಬೆಳಗ್ಗೆ ಗಂಡ ಕುಡಿದು ಸತ್ತಿದ್ದಾನೆ ಎಂದು ನಂಬಿಸಿ ಶವ ಸಂಸ್ಕಾರ ಮಾಡಿಸಿದ್ದಳು. ಹಟ್ಟಿ ಆಲೂರು ಗ್ರಾಮದಲ್ಲಿ ಪತಿಯನ್ನೆ ಕೊಲೆ ಮಾಡಿಸಿದ್ದ ಆರೋಪಿ ಮಾಲಾ ಸೂಪಾರಿ ಕಿಲ್ಲರ್ಸ್, ಕೊಲೆಗೆ ಸುಪಾರಿ ನೀಡಿದ್ದ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಯಶಸ್ಚಿಯಾಗಿದ್ದರು.ಬೆಳಗಾವಿಯ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
