Monday, November 23, 2026
HomeKoppalಸಮಾಜದಲ್ಲಿ ಅಸಾಧಾರಣ ಕೊಡುಗೆ:  ಪಿ. ನಾರಾಯಣ ರವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

ಸಮಾಜದಲ್ಲಿ ಅಸಾಧಾರಣ ಕೊಡುಗೆ:  ಪಿ. ನಾರಾಯಣ ರವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

ಅತ್ಯುನ್ನತ  ಔದ್ಧಿಕ, ನೈತಿಕ ಮೌಲ್ಯಗಳನ್ನು  ಪ್ರತಿನಿಧಿಸುವ ಹರ್ಯಾಣದ ಕೈತಾಲ್‌ ನಿಲಿಮಾ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ

* ಮಾನವ ಸಂಪನ್ಮೂಲ, ಕೈಗಾರಿಕಾ ಬಾಂಧವ್ಯ, ಪರಿಸರ, ಆರೋಗ್ಯ,  ಸುರಕ್ಷತೆ ಮತ್ತು ಸಮುದಾಯದ ಅಭಿವೃದ್ಧಿ ಚಟುವಟಿಕೆಗಳಲ್ಲಿ  36 ವರ್ಷಗಳಿಗಿಂತ ಹೆಚ್ಚು ಅಪಾರ ಅನುಭವವದ ಪಿ.ನಾರಾಯಣ ಅವರಿಗೆ ಸಂದ ಗೌರವ

ಕನ್ನಡಮ್ಮ ಸುದ್ದಿ-ಕೊಪ್ಪಳ : ಕಿರ್ಲೋಸ್ಕರ್‌ ಕಾರ್ಖಾನೆಯಲ್ಲಿ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ಪಿ.ನಾರಾಯಣ ರವರು ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಕೈಗಾರಿಕಾ ಬಾಂಧವ್ಯದಲ್ಲಿ ಸಲ್ಲಿಸಿದ ಅತ್ಯುತ್ತಮ ಕೊಡುಗೆಗಾಗಿ ಹರ್ಯಾಣದ ಕೈತಾಲ್‌ ನಲ್ಲಿರುವ ನಿಲಿಮಾ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.

ನವದೆಹಲಿಯ ಸೂರ್ಯ ಹೋಟೆಲ್‌ನಲ್ಲಿ ಅಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿ.ನಾಯಾಯಣಇವರು ಈ ಪ್ರಶಸ್ತಿ ಪದವಿಯನ್ನು ಸ್ವೀಕರಿಸಿದರು. ಗೌರವ ಡಾಕ್ಟರೇಟ್ ಪ್ರಶಸ್ತಿ ಪದವಿಯು ತಮ್ಮ ಕ್ಷೇತ್ರ, ವೃತ್ತಿ ಅಥವಾ ಒಟ್ಟಾರೆ ಸಮಾಜದಲ್ಲಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ಅತ್ಯುನ್ನತ  ಔದ್ಧಿಕ  ಮತ್ತು ನೈತಿಕ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ.  ಪಿ.ನಾರಾಯಣ ಇವರು ಮಾನವ ಸಂಪನ್ಮೂಲ, ಕೈಗಾರಿಕಾ ಬಾಂಧವ್ಯ, ಪರಿಸರ, ಆರೋಗ್ಯ ಮತ್ತು ಸುರಕ್ಷತೆ ಮತ್ತು ಸಮುದಾಯದ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ 36 ವರ್ಷಗಳಿಗಿಂತ ಹೆಚ್ಚು ಅಪಾರ ಅನುಭವವನ್ನು ಹೊಂದಿರುವ ಕ್ರಿಯಾತ್ಮ ವೃತ್ತಿಪರರು. ಲಾಭದಾಯಕತೆ, ಅತ್ಯುತ್ತಮ ಸಂಪನ್ಮೂಲಗಳ ಬಳಕೆ ಮತ್ತು ಮಾನವ ಸಂಪನ್ಮೂಲ ನೀತಿಗಳು ಮತ್ತು ವ್ಯವಸ್ಥೆಗಳ ಅನುಷ್ಠಾನದಲ್ಲಿಅಪಾರ ಅನುಭವವುಳ್ಳ ಅತ್ಯುತ್ತಮ ನಾಯಕರಾಗಿದ್ದಾರೆ. ಇವರ ವಿಶ್ಲೇಷಣಾತ್ಮಕ ಕೌಶಲ್ಯಗಳು, ಕಾರ್ಯತಂತ್ರದ ಚಿಂತನೆಗಳು ಶಾಂತ ಚಿತ್ತದ ಅವಲೋಕನಗಳು ಇವರೊಂದಿಗೆ ಕೆಲಸ ಮಾಡುವ ಜನರ ಮೇಲೆ ಪ್ರಭಾವ ಬೀರಿದೆ.

ಇವರು ಉತ್ಪಾದನೆ ಮತ್ತು ಉತ್ಪಾದಕತೆಯ ಆದ್ಯತೆಯೊಂದಿಗೆ ಕಾರ್ಮಿಕ ಸಂಘಗಳ ನಡುವೆ 12 ದೀರ್ಘಾವಧಿಯ ವೇತನ ಒಪ್ಪಂದಗಳನ್ನು ಕಾರ್ಯಗತ ಗೊಳಿಸಿದ್ದಾರೆ. ಇವರ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳು ಮಾನವ ಸಂಪನ್ಮೂಲ, ಸುರಕ್ಷತೆ, ವ್ಯವಹಾರದಲ್ಲಿ ಉತ್ಕೃಷ್ಠತೆ ಮತ್ತು ಪರಿಸರ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡಯುವಲ್ಲಿ ಮಹತ್ತರದ ಪಾತ್ರ ವಹಿಸಿದ್ದಾರೆ. ಇವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ವಿಶೇಷವಾಗಿ ಗ್ರಾಮೀಣ ಬಡಜನರು, ವಿದ್ಯಾರ್ಥಿಗಳು ಮತ್ತು ದೀನದಲಿತರಿಗೆ ಸಹಾಯ ಮಾಡಿರುತ್ತಾರೆ . ಹರ್ಯಾಣದ ಕೈತಾಲ್‌ ನಲ್ಲಿರುವ ನಿಲಿಮಾ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಪಿ.ನಾರಾಣ ಅವರಿಗೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿಸ್ಸ್ ಲಿಮಿಟೆಡ್‌ನ ಸಿಎಸ್‌ಆರ್ ಮತ್ತು ಆಡಳಿತದ ವ್ಯವಸ್ಥಾಪಕರಾದ  ಉದ್ದವ್‌ ಕುಲಕರ್ಣಿ ಸೇರಿ ಕಿರ್ಲೋಸ್ಕರ್ ನ ಅಧಿಕಾರಿ, ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿರುವರು. ಇದು ನಿಜವಾಗಿಯೂ ವಿಶೇಷವಾಗಿದ್ದು, ಉನ್ನತವಾದ ಅನುಭೂತಿಯನ್ನು ಹೊಂದಿದ್ದೇನೆ ಹಾಗೂ ನಾನು ಮಾಡಿದ ಕೆಲಸಕ್ಕೆ ಸಿಕ್ಕ ಮನ್ನಣೆಯಾಗಿದೆ. ಈ ಸಾಧನೆಯನ್ನು ಸಾಧಿಸಲು ಮತ್ತು ನನ್ನ ಯಶಸ್ಸಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಕಾರಣೀ ಭೂತರಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ: ಪಿ.ನಾರಾಯಣ, ಕಾರ್ಯನಿರ್ವಾಹಕ ಉಪಾಧ್ಯಕ್ಷರು, ಕಿರ್ಲೋಸ್ಕರ್‌ ಕಾರ್ಖಾನೆಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗ

Total Views 23
RELATED ARTICLES

Most Popular

Recent Comments

KNN City News
Home
E-Paper