
ಬೆಳಗಾವಿ
ಮಾರಿಹಾಳ ಗ್ರಾಪಂ ಸದಸ್ಯೆ ವಾಣಿಶ್ರೀ ಪತಿ ಬಸವರಾಜ ಬೇರೆ ಪತಿಯೊಂದು ಓಡಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಿಹಾಳ ಪೊಲೀಸ್ ಠಾಣೆಯ ಬಳಿ ಪತಿ ಬಸವರಾಜ ಹಾಗೂ ಮಕ್ಕಳನ್ನು ಹುಡಕಿಕೊಡುವಂತೆ ಧರಣಿ ನಡೆಸಿದ ಘಟನೆ ಭಾನುವಾರ ನಡೆದಿದೆ.
ಕಳೆದ 25 ದಿನಗಳಿಂದ ಮಾಸಾಬಿ ಎಂಬ ಬೇರೆ ವಿವಾಹಿತೆಯೊಂದಿಗೆ ಓಡಿ ಹೋಗಿರುವ ಪತಿ ಹಾಗೂ ಮಕ್ಕಳಿಗಾಗಿ ಠಾಣೆ ಮುಂದೆ ಧರಣಿ ನಡೆಸಿದ್ದಾಳೆ. ನಿನ್ನೆ ಮಕ್ಕಳು ಹಾಗೂ ಪತಿ ಕರೆದುಕೊಂಡು ಬಂದು ವಾಣಿಶ್ರೀ ಜೊತೆಗೆ ಸಂದಾನ ಮಾಡಿಸಲು ಯತ್ನಿಸಿದ್ದರು. ಆದರೆ ಮಕ್ಕಳು ವಾಣಿಶ್ರೀ ಬಳಿ ಇರಲು ಒಪ್ಪದಕ್ಕೆ ಮಕ್ಕಳನ್ನು ಕರೆದುಕೊಂಡ ಹೋದ ಬಸವರಾಜ ಆದರೂ ಠಾಣೆಯ ಮುಂದೆ ವಾಣಿಶ್ರೀ ಧರಣಿ ನಡೆಸಿದ್ದಾಳೆ.
ನನ್ನ ಜೀವನ ಹಾಳು ಮಾಡಿ ಬೇರೆ ಮಹಿಳೆಯೊಂದಿಗೆ ಸಂಸಾರ ನಡೆಸಲು ಬಸವರಾಜಗೆ ಬಿಡಲ್ಲ. ನನಗೆ ನನ್ನ ಗಂಡ, ಮಕ್ಕಳು ಬೇಕು ಎಂದು ಪಟ್ಟು ಹಿಡಿದಿರುವ ಆಕೆ ನಾನೂ ದೂರು ಕೊಡಲು ಬಂದರೂ ಮಾರಿಹಾಳ ಪೊಲೀಸರು ಸ್ಪಂದಿಸುತ್ತಿಲ್ಲ. ಪೊಲೀಸರು ನನಗೆ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದ್ದಾಳೆ.
ಆಕೆ ಗಂಡ ಬಿಟ್ಟು ನಿಂತಿದ್ದಾಳೆ ಎಂದರೆ ನಾವು ಹಾಗೆ ನಿಲ್ಲಬೇಕಾ ಆಕೆಗೆ ನನ್ನ ಗಂಡನನ್ನು ಕೊಡುವುದಿಲ್ಲ. ನಿನ್ನೆ ನನಗೆ ಕರೆ ಮಾಡಿ ನಿನ್ನ ಗಂಡನನ್ನು ಬಿಡುವುದಿಲ್ಲ ಎಂದು ಹೇಳಿದ್ದಾಳೆ ಎಂದು ವಾಣಿಶ್ರೀ ಆರೋಪಿಸಿದ್ದಾರೆ.
